ಕಾರ್ಕಳ : ವನ್ಯಜೀವಿ ವಿಭಾಗದ ಕಾರ್ಕಳ ವನ್ಯಜೀವಿ ವಲಯ ಅರೆಕಾಲಿಕ ನೌಕರ, ಕಾರ್ಕಳ ಕಲ್ಲೊಟ್ಟೆ ನಿವಾಸಿ ಸತೀಶ್ (38) ಅವರು ಜ. 22ರಂದು ಮುಂಡ್ಲಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನಿಗೆ ಕರೆ ಮಾಡಿದ್ದ ಸತೀಶ್
ಆರ್ಥಿಕ ಸಂಕಷ್ಟ ಮತ್ತು ಆರೋಗ್ಯದ ಸಮಸ್ಯೆಯಿರುವುದಾಗಿ ಸ್ನೇಹಿತನಿಗೆ ತಿಳಿಸಿದ್ದ ಸತೀಶ್, ಕಚೇರಿಯಲ್ಲಿರುವ ತನ್ನ ಬೈಕ್ ಅನ್ನು ಮನೆಯಲ್ಲಿಡಿ ಎಂದು ಮನವಿ ಮಾಡಿಕೊಂಡಿರುತ್ತಾರೆ. ನೀವೇ ಬಂದು ತಗೊಂಡು ಹೋಗಬಹುದಲ್ಲವೇ ಎಂದು ಸ್ನೇಹಿತ ಹೇಳಿದಾಗ ತಾನಿನ್ನು ಸದ್ಯ ಬರುವುದಿಲ್ಲ ಎಂದು ತಿಳಿಸಿರುತ್ತಾರೆ. ಮೃತರು ಪತ್ನಿ ಹಾಗೂ ಪುಟ್ಟ ಮಗಳನ್ನು ಅಗಲಿರುತ್ತಾರೆ.










