ಕಾರ್ಕಳ : ಮೂಡಬಿದ್ರೆಯ ಶೋರಿನ್-ರಿಯುಕರಾಟೆ ಅಸೋಸಿಯೇಷನ್ ನಡೆಸಿದ ಅಖಿಲ ಭಾರತೀಯ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿ ಪೂರ್ವಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮೋಹಿತ್ ಮೈಂದನ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಗ್ರೀನ್ ಬೆಲ್ಟ್ ಹಾಗೂ ಗ್ರೀನ್ ಬೆಲ್ಟ್ ಕುಮಿಟೆ ಎಂಬ ಎರಡೂ ವಿಭಾಗಗಳಲ್ಲಿಯೂ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇದೇ ಪಂದ್ಯಾಟದಲ್ಲಿ ಕ್ರೈಸ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಣೀಶ್‍ಕಟಾ ಹಾಗೂ ಕುಮಿಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದರೆ ಶ್ರೇಯಸ್‍ದೇವಾಡಿಗ ಕಟಾದಲ್ಲಿ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಅಖಿಲ ಭಾರತೀಯ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕ್ರೈಸ್ಟ್‌ಕಿಂಗ್ ಕಾಲೇಜಿನ ಮೋಹಿತ್ ಮೈಂದನ್‍ಗೆ ಚಿನ್ನದ ಪದಕ











