ಯರ್ಲಪ್ಪಾಡಿ : ಬಾಗಿಲು ಮುರಿದು ಕಳ್ಳತನ

ಕಾರ್ಕಳ : ಯರ್ಲಪ್ಪಾಡಿ ಗ್ರಾಮದ ಜಾರ್ಕಳ ವಿಜೇಂದ್ರ ನಾಯಕ್ (57) ಎಂಬವರ ಮನೆಯ ಬಾಗಿಲು ಮುರಿದು ನುಗ್ಗಿದ ಕಳ್ಳರು 35, 000 ರೂ. ಮೌಲ್ಯದ ಸುಮಾರು 850 ಗ್ರಾಂ. ತೂಕದ ಬೆಳ್ಳಿ ಹಾಗೂ 5,000 ರೂ. ಬೆಲೆಬಾಳುವ ಕೈ ಗಡಿಯಾರ ಕಳ್ಳತನಗೈದಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಅಂದರೆ ಜ. 10ರಿಂದ 14 ರ ಅವಧಿಯಲ್ಲಿ ಬಾಗಿಲಿನ ಚಿಲಕವನ್ನು ಮುರಿದು ಕಳ್ಳತನವೆಸಗಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































error: Content is protected !!
Scroll to Top