ಮಾಡಿನ ವಿಚಾರದಲ್ಲಿ ಜಗಳ : ತಮ್ಮನನ್ನೇ ಕೊಲೆಗೈದು ಬಾವಿಗೆ ದೂಡಿದ ಅಣ್ಣ

ಹೆಬ್ರಿ : ಆತ್ಮಹತ್ಯೆ ಎಂದು ದಾಖಲಿಸಿದ ವ್ಯಕ್ತಿಯ ಸಾವು ಕೊಲೆ ಎಂದು ಸಂಶಯಾಸ್ಪದವಾಗಿ ತಿರುವು ಪಡೆದುಕೊಂಡ ಘಟನೆ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆ ಎಂಬಲ್ಲಿಂದ ವರದಿಯಾಗಿದೆ. ರವಿರಾಜ್ ಶೆಟ್ಟಿಗಾರ್ ಮೃತ ವ್ಯಕ್ತಿ. ಜ.13 ರಂದು ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ನೀರು ಎಳೆಯುವಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ರವಿರಾಜ್‌ ಅವರ ಅಣ್ಣ ಜಯರಾಮ್ ಶೆಟ್ಟಿಗಾರ್‌ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.‌ ರವಿರಾಜ್ ಶೆಟ್ಟಿಗಾರ್ ಮನೆಯ ಪಕ್ಕ ಪ್ರತ್ಯೇಕವಾಗಿ ವಾಸಿಸಲು ನಿರ್ಮಿಸಿದ ಕೋಣೆಯ ಮಾಡನ್ನು ಶಂಕರನಾರಾಯಣ ಶೆಟ್ಟಿಗಾರ್‌ ಕಿತ್ತು ಹಾಕಿದ್ದು ಈ ವಿಷಯದಲ್ಲಿ ಇಬ್ಬರಿಗೂ ಜಗಳವಾಗಿತ್ತು. ಅಲ್ಲದೇ ಮೃತರ ತಲೆಯ ಹಿಂಬದಿಯಲ್ಲಿ ರಕ್ತದ ಗಾಯವೂ ಇದ್ದಿದ್ದರಿಂದ ಸಂಶಯಗೊಂಡು ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ರವಿರಾಜ್‌ ಅವರ ತಲೆಗೆ ಹೊಡೆದು, ಬಳಿಕ ಬಾವಿಗೆ ದೂಡಿ ಹಾಕಿ ಕೊಲ್ಲಲಾಗಿದೆ ಎಂದು ಹೆಬ್ರಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ಮೃತರು ಅವಿವಾಹಿತರಾಗಿದ್ದು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿರುತ್ತಾರೆ.

















































































error: Content is protected !!
Scroll to Top