ಮಂಗಳೂರು :ಯುವಕನ ಸೆಲ್ಫಿ ಹುಚ್ಚಿಗೆ ಜೀವನವೇ ಕರಟಿ ಹೋಯಿತು

ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ವಿದ್ಯುತ್ ಶಾಕ್ ಗೆ ಒಳಗಾಗಿ ಸುಟ್ಟು ಹೋದ ಘಟನೆ ದ.ಕ.ಜಿಲ್ಲೆಯ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಸಲಾನ್ ಪಾರಸ್ (21)ಎಂಬಾತನೇ ಅವಘಡಕ್ಕೆ ಒಳಗಾದ ಯುವಕ. ಸುರತ್ಕಲ್ ಕೊಂಕಣ ರೈಲ್ವೇ ನಿಲ್ದಾಣ ವಿದ್ಯುತ್ತೀಕರಣಗೊಂಡಿದ್ದು,ಕೆಳಮಟ್ಟದಲ್ಲಿ ಹೈವೋಲ್ಟೇಜ್ ತಂತಿಗಳನ್ನು ಆಳವಡಿಸಲಾಗಿದೆ. ಅಪಾಯದ ಬೋರ್ಡನ್ನು ಕೂಡ ಹಾಕಲಾಗಿತ್ತು.

ಯುವಕ ಸಲಾನ್ ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ತೆರಳಿದ್ದ ಹೈವೋಲ್ಟೇಜ್ ತಂತಿಗಳನ್ನು ಗಮನಿಸದೇ ಇದ್ದುದ್ದರಿಂದ ವಿದ್ಯುತ್ ಶಾಕ್ ಹೊಡೆದು ಭಾಗಶಃ ಸುಟ್ಟು ಹೋಗಿದ್ದಾನೆ.

ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.































































error: Content is protected !!
Scroll to Top