Thursday, December 2, 2021
spot_img
Homeಸುದ್ದಿಹಸುಗೂಸಿಗಾಗಿ ತಾನೇ ಔಷಧ ಕಂಡುಹಿಡಿದ ತಂದೆ

ಹಸುಗೂಸಿಗಾಗಿ ತಾನೇ ಔಷಧ ಕಂಡುಹಿಡಿದ ತಂದೆ

ಅನಿವಾರ್ಯತೆಗಳು ಆವಿಷ್ಕಾರದ ಮೂಲ ಎನ್ನುತ್ತದೆ ಮಾತೊಂದು. ಸವಾಲುಗಳು ಎದುರಾದಾಗಲೇ ಹೊಸ ಪ್ರಯೋಗಗಳು ಮತ್ತು ಪ್ರಯತ್ನಗಳು ನಡೆಯುತ್ತವೆ. ಇದು ಬದುಕಿನ ಅಳಿವು ಉಳಿವಿನ ಪ್ರಶ್ನೆ ಬಂದಾಗಲೂ ಸಾಧ್ಯ, ದೃಢನಿಶ್ಚಯ ಮತ್ತು ಬದ್ಧತೆ ಇದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ಮನಕಲಕುವ ಘಟನೆ ಸಾಬೀತುಪಡಿಸಿದೆ.

ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಸಾವಿನಂಚಿನಲ್ಲಿದ್ದ ಎರಡು ವರ್ಷದ ತನ್ನ ಮಗುವನ್ನು ರಕ್ಷಿಸಲು ತಂದೆಯೇ ಸಂಶೋಧಕನಾದ ಕಥೆಯಿದು. ಅಂದಹಾಗೆ, ಇದು ನಡೆದಿರುವುದು ಚೀನಾದಲ್ಲಿ.

ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ನಿಂಗ್‌ನಲ್ಲಿ ವಾಸಿಸುತ್ತಿರುವ ಕು ವೀ ಅವರ ಎರಡು ವರ್ಷದ ಮಗು ಹಾಯೊಯಂಗ್ ಹೆಚ್ಚೆಂದರೆ ಕೆಲವು ತಿಂಗಳು ಬದುಕುವ ಸ್ಥಿತಿಯಲ್ಲಿತ್ತು. ಆಪರೂಪದ ಅನುವಂಶಿಕ ಆರೋಗ್ಯ ಸಮಸ್ಯೆಯಿಂದ ಹೊರಬರಲು ಇದ್ದ ಏಕೈಕ ಔಷಧ ಚೀನಾದ ಯಾವುದೇ ಮೂಲೆಯಲ್ಲಿಯೂ ಲಭ್ಯವಿರಲಿಲ್ಲ. ಹೇಳಿ ಕೇಳಿ ಅದು ಕೊರೊನಾ ವೈರಸ್ ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಮಯ, ಚೀನಾ ಸೇರಿದಂತೆ ಬಹುತೇಕ ದೇಶಗಳ ಗಡಿಗಳು ವಿದೇಶಿಗರಿಗೆ ಮುಚ್ಚಿದ್ದವು.

ಹೀಗಾಗಿ ಚಿಕಿತ್ಸೆಗಾಗಿ ಪರದೇಶಕ್ಕೆ ತೆರಳಲಾಗದ ಸ್ಥಿತಿ ಇತ್ತು. ಮಗುವಿನ ಜೀವ ಉಳಿಸುವುದು ತನ್ನಿಂದ ಸಾಧ್ಯವೇ ಇಲ್ಲ ಎಂದು ಕು ವೀ ಹತಾಶನಾಗಿ ಕೈಚೆಲ್ಲಿ ಕೂರಲಿಲ್ಲ, ಬದಲಾಗಿ ತಮ್ಮ ಮನೆಯನ್ನೇ ಪ್ರಯೋಗಾಲಯವನಾಗಿ ಮಾಡಿದರು.

ಮಗನಿಗಾಗಿ ಸ್ವತಃ ಔಷಧ ಕಂಡುಹಿಡಿಯುವ ಸಾಹಸಕ್ಕೆ ಕೈಹಾಕಿದರು. ಹಾಯೊಯಂಗ್‌ಗೆ ಇದ್ದಿದ್ದು ಮೆಕಸ್‌’ ಎಂಬ ಕಾಯಿಲೆ, ಇದು ಹುಟ್ಟಿನಿಂದಲೇ ಬರುವ ಅಪರೂಪದ ಸಿಂಡೋಮ್.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!