ಕಾರ್ಕಳ : ಶಾರದಾ ಮಹಿಳಾ ಮಂಡಲ ಅನಂತಶಯನ ಇದರ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ನ. 20 ರಂದು ನಗರದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು. ಪೆರ್ವಾಜೆ ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮೀ ಹೆಗಡೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಡಳಿಯ ಅಧ್ಯಕ್ಷೆ ವಾರಿಜಾ ಕಾಮತ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಶೈಲಜಾ ವಿ. ಮೂರ್ತಿ, ಭಾರತಿ ಅಮೀನ್, ಸಾವಿತ್ರಿ ಮನೋಹರ್, ಉಮಾ ಕುಲಕರ್ಣಿ, ರೂಪಾ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಜ್ಯೋತಿ ಫಾಟಕ್ ಕಾರ್ಯಕ್ರಮ ನಿರೂಪಿಸಿ, ಉಮಾ ಚಿಪ್ಳೂಣಕರ್ ವಂದಿಸಿದರು.
ಶಾರದಾ ಮಹಿಳಾ ಮಂಡಲದ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ









































