ನಂದಳಿಕೆ : ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ : ನಂದಳಿಕೆ ಗ್ರಾಮದ ಮಂಜುನಾಥ ದೇವಾಡಿಗ (43) ನ. 19 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಾದ್ಯಗಾರಿಕೆ ಕೆಲಸ ಮಾಡುತ್ತಿದ್ದು‌ ವರ್ಷದ ಹಿಂದೆ ನಂದಳಿಕೆಯಲ್ಲಿ ಮನೆ ಮಾಡಿ ವಾಸವಾಗಿದ್ದರು. ಮನೆ ಮಾಡಿದ ಸಾಲ ಬಾಕಿ ಇರುವುದಾಗಿ ಈ ಹಿಂದೆ ತಿಳಿಸಿದ್ದು ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು.

ನ. 18 ರ ಮಧ್ಯಾಹ್ನ 2 ಗಂಟೆಗೆ ಮಿಯಾರಿನ ಮನೆಗೆ ಬಂದು ಬಜಗೋಳಿಗೆ ಹೋಗುವುದಾಗಿ ತಾಯಿಗೆ ತಿಳಿಸಿ ಹೋದವರು ವಾಪಾಸು ಮನೆಗೂ ಬಾರದೇ ನಂದಳಿಕೆಯ ಮನೆಗೂ ಹೋಗದೇ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಮಿಯಾರು ಹೊಳೆಯ ಸಮೀಪ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಮಂಜುನಾಥರ ತಮ್ಮ ಕಾರ್ಕಳ ನಗರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.







































































error: Content is protected !!
Scroll to Top