ಕಾರ್ಕಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಇದರ ವತಿಯಿಂದ ಡಿಸೆಂಬರ್ 12 ಕ್ಕೆ ದತ್ತ ಜಯಂತಿ ಪ್ರಯುಕ್ತ ನಡೆಯುವ ಬ್ರಹತ್ ಹಿಂದೂ ಸಂಗಮ ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮ ವು ಕಾರ್ಕಳದ ಗೋಮಟೇಶ್ವರ ಬೆಟ್ಟದಲ್ಲಿ ನಡೆಯಿತು
ಹಿರಿಯ ನ್ಯಾಯವಾದಿ ಎಂ ಕೆ ವಿಜಯಕುಮಾರ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಕರಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಎಂ.ಕೆ. ವಿಜಯಕುಮಾರ್ ಮಾತನಾಡಿ ಕಾರ್ಯಕ್ರಮ ಯಶಸ್ವಿ ಯಾಗಿ ನಡೆಯಲಿ, ಎಲ್ಲಾ ಹಿಂದೂ ಭಾಂದವರು ಭಾಗವಹಿಸಿ ನಮ್ಮ ಐಕ್ಯತೆ ಯನ್ನು ಪ್ರದಶಿಸೋಣ ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಬಜರಂಗದಳ ದ ಪ್ರಾಂತ ಸಂಯೋಜಕರಾದ ಸುನಿಲ್ ಕೆ ಆರ್, ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ಮಹಾವೀರ್ ಹೆಗ್ಡೆ, ಪಕ್ಷದ ಪ್ರಮುಖರಾದ ಅನಂತಕೃಷ್ಣ ಶೆಣೈ, ರೇಷ್ಮಾ ಶೆಟ್ಟಿ, ಪುರಸಭಾ ಅಧ್ಯಕ್ಷಾರಾದ ಸುಮಾ ಕೇಶವ, ಪ್ರಕಾಶ್ ರಾವ್ , ಅರುಣ್ ನಿಟ್ಟೆ, ವಿಶ್ವ ಹಿಂದೂ ಪರಿಷತಿನ್ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ , ಕಾರ್ಕಳ ಸಂಘಟನೆಯ ಪ್ರಮುಖರಾದ ಅಶೋಕ್ ಜೈನ್, ಜಗದೀಶ್ ಸಾಣೂರ್,ಸುಧೀರ್ ನಿಟ್ಟೆ ಚೇತನ್ ಪೆರಲ್ಕೆ, ಮನೋಜ್, ಪ್ರಸಾದ್, ಶೈಲೇಶ್, ದುರ್ಗಾವಾಹಿನಿ ಸಂಚಾಲಕಿ ಸುರಕ್ಷಾ ಮತ್ತಿತರರು ಉಪಸ್ಥಿತರಿದ್ದರು.

































