Tuesday, December 7, 2021
spot_img
Homeಸ್ಥಳೀಯ ಸುದ್ದಿಹೆಬ್ರಿ : ಕಾಡು ಪ್ರದೇಶದಲ್ಲಿ ತಳಮಟ್ಟದಲ್ಲಿ ಹಾರಿದ ಹೆಲಿಕಾಪ್ಟರ್‌

ಹೆಬ್ರಿ : ಕಾಡು ಪ್ರದೇಶದಲ್ಲಿ ತಳಮಟ್ಟದಲ್ಲಿ ಹಾರಿದ ಹೆಲಿಕಾಪ್ಟರ್‌

ಹೆಲಿಕಾಪ್ಟರ್ ನಿಂದ ವ್ಯಕ್ತಿಗಳು ಇಳಿದರು ಎಂದ ಬಾಲಕ

ಆತಂಕಕ್ಕೀಡಾದ ಸ್ಥಳೀಯರು

ಕಾರ್ಕಳ : ಹೆಬ್ರಿ ತಾಲೂಕು ಬೈರಂಪಳ್ಳಿ ಪ್ರದೇಶದಲ್ಲಿ ಸೆ. 21ರ ಮಧ್ಯಾಹ್ನ 12 ರ ವೇಳೆ ಹೆಲಿಕಾಪ್ಟರೊಂದು ತಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸ್ಥಳೀಯರಲ್ಲೊಮ್ಮೆ ಆತಂಕಕ್ಕೀಡು ಮಾಡಿತು. ಹೆಲಿಕಾಪ್ಟರ್‌ ನೋಡಿದ 13 ವರ್ಷದ ಬಾಲಕನೋರ್ವ ಹೆಲಿಕಾಪ್ಟರ್‌ ನಿಂದ ವ್ಯಕ್ತಿಗಳು ಇಳಿದು ಹೋದರು ಎಂದು ಮನೆಯವರಲ್ಲಿ ತಿಳಿಸಿದ್ದು, ಅಪರಿಚಿತರು ಬೈರಂಪಳ್ಳಿ ಪರಿಸರದಲ್ಲಿ ಅವಿತಿದ್ದಾರೆ ಎಂಬ ಸುದ್ದಿ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿತು. ಈ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸುದ್ದಿ ತಿಳಿದ ಅಜೆಕಾರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

ವಾಸ್ತವ ವಿಚಾರ
ವಾಸ್ತವ ವಿಚಾರವೇನೆಂದರೆ ಸಚಿವ ಮುರಗೇಶ್‌ ನಿರಾಣಿ ಹೆಲಿಕಾಪ್ಟರ್‌ನಲ್ಲಿ ಶೃಂಗೇರಿ ತೆರಳಿದ್ದು, ಆ ಹೆಲಿಕಾಪ್ಟರ್‌ ನೋಡಿದ ಬಾಲಕ ಹೆಲಿಕಾಪ್ಟರ್‌ನಿಂದ ವ್ಯಕ್ತಿಗಳು ಇಳಿದಿರುತ್ತಾರೆ ಎಂದು ಮಾಹಿತಿ ನೀಡಿರುತ್ತಾನೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!