Saturday, October 16, 2021
spot_img
Homeವಿದೇಶಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿ ಪ್ರಸಾರಕ್ಕೆ ತಾಲಿಬಾನ್ ನಿಷೇಧ

ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿ ಪ್ರಸಾರಕ್ಕೆ ತಾಲಿಬಾನ್ ನಿಷೇಧ

ಕಾಬೂಲ್: ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಇದೀಗ ತನ್ನ ಆಡಳಿತದ ಮೂಲಕ ನಿತ್ಯವೂ ಸುದ್ದಿಯಾಗುತ್ತಿದ್ದು, ಈ ಹಿಂದೆ ಮಹಿಳಾ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ್ದ ತಾಲಿಬಾನ್ ಇದೀಗ ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಗೆ ನಿಷೇಧ ಹೇರಿದೆ.

ಹೌದು..  ಈ ಹಿಂದೆ ಮಹಿಳಾ ಕ್ರಿಕೆಟ್​ ಅನ್ನು ನಿಷೇಧಿಸಿ ಸುದ್ದಿಯಲ್ಲಿದ್ದ ತಾಲಿಬಾನಿಗಳು ಈ ಬಾರಿ ಅಫ್ಘಾನಿಸ್ತಾನದಲ್ಲಿ ಐಪಿಎಲ್​ ಪ್ರಸಾರ ಮಾಡಕೂಡದು ಎಂದು ಆದೇಶ ಹೊರಡಿಸಿದ್ದಾರೆ. ಐಪಿಎಲ್​ ಇಸ್ಲಾಂ ವಿರೋಧಿಯಾಗಿದ್ದು, ಐಪಿಎಲ್​ ಟೂರ್ನಿ ವೇಳೆ ತುಂಡುಡುಗೆಯಲ್ಲಿ ಮಹಿಳೆಯರು ನೃತ್ಯ ಮಾಡುತ್ತಾರೆ. ಅಲ್ಲದೆ ಐಪಿಎಲ್​ ವೇಳೆ ಕ್ರೀಡಾಂಗಣದಲ್ಲಿ ತುಂಡುಡುಗೆಯಲ್ಲಿ ಮತ್ತು ಇಸ್ಲಾಂ ಕಾನೂನಿಗೆ ವಿರುದ್ಧವಾಗಿ ಮಹಿಳೆಯರು ಕಾಣಿಸಿಕೊಳ್ಳುತ್ತಾರೆ. ಇದು ಇಸ್ಲಾಂಗೆ ವಿರುದ್ದವಾಗಿದ್ದು, ಹಾಗಾಗಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮಾಜಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ವ್ಯವಸ್ಥಾಪಕ ಮತ್ತು ಪತ್ರಕರ್ತ, ಎಂ. ಇಬ್ರಾಹಿಂ ಮೊಮಾಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅಫ್ಘಾನಿಸ್ತಾನ ಆಟಗಾರರಾದ ಮುಜೀಬ್​ ಉರ್ ರೆಹಮಾನ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದು, ಇವರ ಆಟವನ್ನು ವೀಕ್ಷಿಸಲು ಈಗ ಅಫ್ಘಾನಿಸ್ತಾನ್​ ಕ್ರಿಕೆಟ್ ಪ್ರೇಮಿಗಳಿಗೆ ಭಾಗ್ಯವಿಲ್ಲದಂತಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!