ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಿದ್ದ ಮಗಳನ್ನು ಕಿಡ್ನಾಪ್ ಮಾಡಿದ ತಾಯಿ!

ಕಾರವಾರ: ತನ್ನ ಇಷ್ಟಕ್ಕೆ ವಿರುದ್ಧವಾಗಿ ಬೇರೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ತಾಯಿಯೇ ಕಿಡ್ನಾಪ್ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದಿದೆ.

ಕಿಡ್ನಾಪ್ ಆದ ಮಹಿಳೆಯನ್ನು ರುತಿಕಾ ಎಂದು ಗುರುತಿಸಲಾಗಿದ್ದು ಈಕೆಯ ತಾಯಿ ರೂಪ ಸಿರ್ಸಿಕರ್ ಸ್ವತಃ ಮಗಳನ್ನು ಕಿಡ್ನಾಪ್ ಮಾಡಿ ಕುಟುಂಬದವರೊಡನೆ ಪರಾರಿಯಾಗಿದ್ದಾಳೆ. ರುತಿಕಾ ಶಿರಸಿಯ ಬಸವೇಶ್ವರ ನಗರದ ಮಣಿಕಂಠ ಎಂಬುವವನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಈ ಬಗ್ಗೆ ರುತಿಕಾ ತಾಯಿ ರೂಪಾಗೆ ಒಪ್ಪಿಗೆ ಇರಲಿಲ್ಲ. ಮಗಳು ತನಗಿಷ್ಟವಿಲ್ಲದ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕೋಪಕ್ಕೆ ಇಂದು ಬೆಳಿಗ್ಗೆ ಮೂವರು ಯುವಕರೊಡನೆ ರುತಿಕಾ ಮನೆಗೆ ಆಗಮಿಸಿದ್ದಾಳೆ. ಆ ವೇಳೆ ರುತಿಕಾ ಮನೆಯವರೆಲ್ಲರ ಮೇಲೆ ಪೆಪ್ಪರ್ ಸ್ಪ್ರೇ ಎರಚಿದ ರೂಪಾ ಮಗಳು ರುತಿಕಾಳನ್ನು ತಾನು ಬಂದಿದ್ದ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಪರಾರಿಯಾಗಿದ್ದಾಳೆ.

ಕಿಡ್ನಾಪ್ ಆಗಿರುವ ಮಹಿಳೆ ರುತಿಕಾ

ಘಟನೆ ಸಂಬಂಧ ರುತಿಕಾ ಪತಿ ಮಣಿಕಂಠ ಶಿರಸಿ ಮಾರುಕಟ್ಟೆ ಪೋಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೋಲೀಸರೀಗ ರೂಪಾ ಹಾಗೂ ರುತಿಕಾಗಾಗಿ ಶೋಧ ನಡೆಸಿದ್ದಾರ













































































error: Content is protected !!
Scroll to Top