ಕಾರ್ಕಳ : ಅಟಲ್‍ ಸಂಸ್ಮರಣಾ ದಿನಾಚರಣೆ

ಕಾರ್ಕಳ : ಜನಸಂಘ ಹಾಗೂ ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒರ್ವರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಕಾರ್ಕಳ ಶಾಸಕರ ಕಚೇರಿ ವಿಕಾಸದಲ್ಲಿ ಡಿ. 25ರಂದು ಆಚರಿಸಲಾಯಿತು. ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಅಟಲ್‌ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಅಟಲ್‍ಜೀ ಕೇವಲ ಅಜಾತ ಶತ್ರುವಲ್ಲ, ಅವರು ವಿಶ್ವ ಮಾನವ ಎಂಬುವುದಕ್ಕೆ ಅವರ ನಡೆ, ನುಡಿಯೇ ಸಾಕ್ಷಿ. ಅತ್ಯಂತ ಸರಳ ಜೀವನ ಶೈಲಿ ಮೈಗೂಡಿಸಿಕೊಂಡಿದ್ದ ವಾಜಪೇಯಿ ಯಾರ ಮನಸ್ಸನ್ನು ನೋಯಿಸಿದವರಲ್ಲ. ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದರು. 1985 ರಲ್ಲಿ ಕಾರ್ಕಳಕ್ಕೆ ಭೇಟಿ ನೀಡಿ ಕಾರ್ಯಕರ್ತರಿಗೆ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರೇರಣೆ ನೀಡಿರುವುದು ಇವತ್ತಿಗೂ ಸ್ಮರಣೀಯ ಎಂದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಬಿಜೆಪಿ ಮಾಜಿ ವಕ್ತಾರ ಕೆ.ಎಸ್. ಹರೀಶ್ ಶೆಣೈ, ಹರೀಶ್ ಅಂಚನ್, ಶ್ರೀನಿವಾಸ ಕಾರ್ಲ ಮತ್ತಿತರರು ಉಪಸ್ಥಿತರಿದ್ದರು.













































































error: Content is protected !!
Scroll to Top