ಉಡುಪಿ, ನ. 26: ಕರ್ನಾಟಕ ಮಾರ್ಕೆಟಿಂಗ್ ಕಮ್ಯುನಿಕೇಶನ್ ಮತ್ತು ಅಡ್ವರ್ಟೈಸಿಂಗ್ (ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು) ನಿಗಮದ ಅಧ್ಯಕ್ಷರಾಗಿ ಕಾಪು ಶಾಸಕ ಲಾಲಾಜಿ ಮೆಂಡನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದು ಪ್ರತಿಷ್ಠಿತ ಹುದ್ದೆಯೇ ಆಗಿದ್ದರೂ ಲಾಲಾಜಿ ಮೆಂಡನ್ ಅವರ ಮಂತ್ರಿಯಾಗುವ ಆಸೆಗೆ ಬ್ರೇಕ್ ಹಾಕಿದಂತಾಗಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೂ ಮುಂಚಿತವಾಗಿ ಆಕಾಂಕ್ಷಿಗಳಿಗೆಲ್ಲ ಆಯಕಟ್ಟಿನ ಹುದ್ದೆಗಳನ್ನು ನೀಡಿ ತೃಪ್ತಿಪಡಿಸುವ ತಂತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅನುಸರಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಲಾಲಾಜಿ ಮೆಂಡನ್ ಮೂರನೇ ಬಾರಿಗೆ ಶಾಸಕರಾದವರು. ಸ್ವಚ್ಛ ವ್ಯಕ್ತಿತ್ವ ಹೊಂದಿದ್ದಾರೆ. ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂಬ ಅಭಿಪ್ರಾಯವಿದೆ.ಮೀನುಗಾರ ಆಯ್ಕೆಯಾಗಿರುವ ಏಕೈಕ ಶಾಸಕ ಅವರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರಿಗೆ ಮಂತ್ರಿ ಪದವಿ ಕೊಡಬೇಕೆಂಬ ಬಲವಾದ ಬೇಡಿಕೆ ಕೇಳಿ ಬಂದಿತ್ತು.ಆದರೆ ನಿಗಮದ ಹುದ್ದೆಯನ್ನು ಒಪ್ಪಿಕೊಂಡರೆ ಅವರು ಮಂತ್ರಿಯಾಗುವುದು ಸಾಧ್ಯವಿಲ್ಲ. ಇದರಿಂದ ಲಾಲಾಜಿ ಮೆಂಡನ್ ಸಚಿವರಾಗಿರಬೇಕೆಂದು ಆಗ್ರಹಿಸಿರುವ ಮೀನುಗಾರ ಸಮುದಾಯದವರ ಬೇಡಿಕೆಗೂ ತಣ್ಣೀರು ಎರಚಿದಂತಾಗಿದೆ.
ಶಾಸಕ ಲಾಲಾಜಿ ಮೆಂಡನ್ಗೂ ನಿಗಮ ಅಧ್ಯಕ್ಷ ಹುದ್ದೆ








































