ನಿವಾರ್‌ ಚಂಡಮಾರುತಕ್ಕೆ ತಮಿಳುನಾಡಿನಲ್ಲಿ 5 ಮಂದಿ ಬಲಿ

ಚೆನ್ನೈನ. 26 : ಪ್ರಳಯಾಂತಕ ನಿವಾರ್‌ ಚಂಡಮಾರುತ ಭಾರಿ ಮಳೆ ಮತ್ತು ತೀವ್ರ ಗಾಳಿಯೊಂದಿಗೆ ಬುಧವಾರ ತಡರಾತ್ರಿ ಪುದುಚೇರಿ ಮತ್ತು ಕಡಲೂರು ಜಿಲ್ಲೆಯ ಕರಾವಳಿ ಪ್ರವೇಶಿಸಿದ್ದು, ಭಾರೀ ಮಳೆಯಿಂದಾಗಿ ಸಂಭವಿಸಿದ ವಿವಿಧ ಅನಾಹುತಗಳಲ್ಲಿ ಚೆನ್ನೈನಲ್ಲಿ 5 ಮಂದಿ ಸಾವನ್ನಪ್ಪಿ, ನೂರಾರು ಮರಗಳು ಧರೆಗುರುಳಿವೆ.
ಚಂಡಮಾರುತದಿಂದಗಾಇ ಜನಜೀವನ ಸಂಪೂರ್ಣ ಆಸ್ತವ್ಯಸ್ತಗೊಂಡಿದೆ. ಬುಧವಾರ ರಾತ್ರಿಯೇ ನಿವಾರ್‌ ತೀವ್ರ ಸ್ವರೂಪ ಪಡೆದುಕೊಂಡಿದೆ. ತಾಸಿಗೆ 120-130 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶಗಳಲ್ಲಿ ಕಟ್ಟಚ್ಚರಿಕೆ ಘೋಷಿಸಲಾಗಿದೆ.

ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಮಿಳುನಾಡಿನಲ್ಲಿ ಮಂಗಳವಾರದಿಂದಲೇ ಮಳೆಯಾಗುತ್ತಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಗುರುವಾರ ರಜೆ ಘೋಷಿಸಲಾಗಿದೆ. ಚಂಡಮಾರುತದ ಸವಾಲುಗಳನ್ನು ಎದುರಿಸಲು ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 1200 ಸಿಬ್ಬಂದಿ ಸಜ್ಜಾಗಿದ್ದಾರೆ. ಇತರೆ 800 ಹೆಚ್ಚುವರಿ ಮಂದಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಮತ್ತೊಂದೆಡೆ ಆಂಧ್ರಪ್ರದೇಶದ ಮೇಲೆ ಗತಿ ಚಂಡಮಾರುತ ಕೂಡ ದಾಳಿ ನಡೆಸುತ್ತಿದೆ.

















































































error: Content is protected !!
Scroll to Top