26/11 ವಾರ್ಷಿಕ ದಿನದಂದು ಭೀಕರ ದಾಳಿ ನಡೆಸಲು ಉಗ್ರರ ಸಂಚು

ದಿಲ್ಲಿ, ನ.20 : ಮುಂಬೈ ನಗರದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ವಾರ್ಷಿಕ ದಿನವಾದ ನ.26ರಂದು ಮತ್ತೊಂದು ದಾಳಿ ನಡೆಸಲು ಉಗ್ರರು ಸಂಚು ನಡೆಸುತ್ತಿರುವ ಮಾಹಿತಿಯನ್ನು ಗೂಢಚಾರ ಪಡೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಭದ್ರತಾ ಸಭೆ ನಡೆಸಿದ್ದಾರೆ.
26/11 ಎಂದೇ ಗುರುತಿಸುವ ದಾಳಿಯ ವಾರ್ಷಿಕ ದಿನದಂದೇ ದೇಶದಲ್ಲಿ ಭೀಕರ ಸ್ಫೋಟಗಳನ್ನು ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಬೇಹು ಮಾಹಿತಿಯನ್ನು ಗೂಢಚಾರ ಪಡೆ ಸರಕಾರಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶಿಂಗ್ಲಾ ಹಾಗೂ ಇನ್ನಿತರ ಉನ್ನತಾಧಿಕಾರಿಗಳ ಜೊತೆಗೆ ಮೋದಿ ಸಮಾಲೋಚನೆ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಗ್ರೋಟದಲ್ಲಿ ನಿನ್ನೆ ನಡೆದ ಎನ್‌ಕೌಂಟರ್‌ಗೆ ಬಲಿಯಾಗಿರುವ ನಾಲ್ವರು ಜೈಶ್‌ -ಎ- ಮೊಹಮ್ಮದ್ ಉಗ್ರರು ಈ ಸಂಚಿನ ಭಾಗವಾಗಿದ್ದರು ಎಂದು ಬೇಹು ಪಡೆ ಮಾಹಿತಿ ನೀಡಿದೆ.
2008ರ ನವೆಂಬರ್ 26ರಂದು ಮುಂಬಯಿ ಮೇಲೆ ಬೃಹತ್ ಭಯೋತ್ಪಾದನಾ ದಾಳಿ ನಡೆದಿತ್ತು. 10 ಮಂದಿ ಪಾಕ್‌ ಲಷ್ಕರ್-ಇ-ತೋಯ್ಬಾದ ಉಗ್ರರು ಸರಣಿ ಗುಂಡಿನ ದಾಳಿಯನ್ನು ನಡೆಸಿದ್ದರು. ಇದರಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು.









































































error: Content is protected !!
Scroll to Top