ಸಹಕಾರಿ ತತ್ವ ನಮ್ಮಲ್ಲರ ಬದುಕಿನಲ್ಲಿದೆ-ಕೊಂಕೋಡಿ ಪದ್ಮನಾಭ ಭಟ್‌

0

ಸಹಕಾರಿ ಸಂಘಗಳಿಂದು ಬಲಿಷ್ಠವಾಗಿದೆ- ಕೊಂಕೋಡಿ ಪದ್ಮನಾಭ ಭಟ್‌
ನಮ್ಮೆಲ್ಲರ ಬದುಕಿನಲ್ಲಿ ಸಹಕಾರ ತತ್ವ ಹಾಸು ಹೊಕ್ಕಾಗಿದ್ದು ಸಹಕಾರ, ಪ್ರೀತಿ, ವಿಶ್ವಾಸದಿಂದಲೇ ಸಂಘಗಳಿಂದು ಬಲಿಷ್ಠವಾಗಿ ಬೆಳೆದಿದೆ ಎಂದು ಸಹಕಾರ ಭಾರತೀ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೊಂಕೋಡಿ ಪದ್ಮನಾಭ ಭಟ್‌ ಹೇಳಿದರು.
ಅವರು ನ. 19ರಂದು ಸಹಕಾರ ಭಾರತಿ ಕಾರ್ಕಳ, ವಿಕಾಸ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಕಾರ್ಕಳ, ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ಶ್ರೀ ಮಂಜುನಾಥ್ ಪೈ ಸಭಾಂಗಣದಲ್ಲಿ ಸಹಕರಾ ಸಪ್ತಾಹದಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ವಾಂಗೀಣ ಅಭಿವೃದ್ಧಿ ಸಾಧ್ಯ
ಯುವಜನರು ಮತ್ತು ಮಹಿಳೆಯರು ಸಹಕಾರಿ ರಂಗದಲ್ಲಿ ಸಕ್ರೀಯವಾಗಿ ತೊಡಗಿಕೊಂಡಾಗ ದೇಶ ಸರ್ವಾಂಗೀಣವಾಗಿ ಅಭಿವೃದ್ಧಿಗೊಳ್ಳುವುದು. ಈ ನಿಟ್ಟಿನಲ್ಲಿ ಯುವಜನತೆಗೆ ಮತ್ತು ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕೆಂದು ಸಹಕಾರ ಭಾರತೀಯ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಲದ ನಿರ್ದೇಶಕ ಬೋಳ ಸದಾಶಿವ ಶೆಟ್ಟಿ ಅಭಿಪ್ರಾಯಪಟ್ಟರು.

ಕಳೆದ 12 ವರ್ಷಗಳ ಹಿಂದೆ ರಾಜ್ಯ ಸೌಹಾರ್ದ ಕಾಯ್ದೆಯಡಿಯಲ್ಲಿ ಸ್ಥಾಪನೆಗೊಂಡ ವಿಕಾಸ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯ ಜೊತೆಗೆ ಕಾರ್ಕಳ, ಹೆಬ್ರಿ ಮತ್ತು ಬೆಳ್ಮಣ್‍ನಲ್ಲಿ ಮೂರು ಶಾಖೆಗಳನ್ನು ಹೊಂದಿದೆ. ಕಾರ್ಕಳ ತಾಲೂಕಿನಲ್ಲಿ 430 ಸ್ವಸಹಾಯ ಗುಂಪು ರಚಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ 3,500 ಕ್ಕಿಂತಲೂ ಹೆಚ್ಚು ಸದಸ್ಯರು ಸಕ್ರೀಯವಾಗಿ ಸಹಕಾರಿಯ ಸಂಸ್ಠೆಯಡಿಯಲ್ಲಿ ಸಂಘಟಿತರಾಗಿದ್ದಾರೆ. ಯುವಜನತೆ ಮತ್ತು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸ್ವ ಉದೋಗ್ಯವನ್ನು ಕೈಗೊಳ್ಳಲು ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಲಾಗುವುದು.
ಬೋಳ ಸದಾಶಿವ ಶೆಟ್ಟಿ
ಉಪಾಧ್ಯಕ್ಷರು, ವಿಕಾಸ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆ

ಕಾರ್ಕಳ ತಾಲೂಕು ಪಂಚಾಯತ್‌ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಕರ್ನಾಟಕ ರಾಜ್ಯ ಮಹಾಮಂಡಲದ ನಿರ್ದೇಶಕ ಮಂಜುನಾಥ ಎಸ್.ಕೆ., ನ್ಯಾಯವಾದಿ ಸಹನಾ ಕುಂದರ್‌, ಸಹಕಾರ ಭಾರತಿ ಪ್ರಮುಖರಾದ ದಯಾನಂದ ಕಡ್ತಲ, ಸುರೇಶ್ ರಾವ್ ನಿಟ್ಟೆ, ಜಯರಾಮ್ ಸಾಲ್ಯಾನ್, ವಿನಯ ರಾನಡೆ, ಪ್ರಶಾಂತ್, ರಮೇಶ್ ಹೆಗ್ಡೆ, ಶ್ರೀನಿವಾಸ್ ಕಾರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳೆದ 3 ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೋಳ ಸದಾಶಿವ ಶೆಟ್ಟಿಯವರನ್ನು ಶುಭಂ ಶೈಕ್ಷಣಿಕ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಹಕಾರಿ ಭಾರತೀ ತಾಲೂಕು ಅಧ್ಯಕ್ಷ ಹರೀಶ್ ಕಲ್ಯಾ ಸ್ವಾಗತಿಸಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್‍ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ತಾಲೂಕು ಅಧ್ಯಕ್ಷ ವಸಂತ ನಾಯ್ಕ ವಂದಿಸಿದರು.

Previous article26/11 ವಾರ್ಷಿಕ ದಿನದಂದು ಭೀಕರ ದಾಳಿ ನಡೆಸಲು ಉಗ್ರರ ಸಂಚು
Next articleಎಸ್‌ಬಿಐಯಲ್ಲಿ 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳು

LEAVE A REPLY

Please enter your comment!
Please enter your name here