OTTಯಲ್ಲಿ ದಾಖಲೆ ಬರೆದ ಲಕ್ಷ್ಮೀ

ಅಕ್ಷಯ ಕುಮಾರ್ ಅಭಿನಯದ ಲಕ್ಷ್ಮೀ ಹಿಂದಿ ಸಿನಿಮಾ OTTಯಲ್ಲಿ ಈ ದೀಪಾವಳಿಗೆ ಬಿಡುಗಡೆಯಾಗಿದ್ದು, ಮೊದಲ ದಿನದ ಕಲೆಕ್ಷನ್ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಅಷ್ಟು ಹೆವಿ ಬಜೆಟ್ಟಿನ ಮಾಸ್ ಫಿಲ್ಮನ್ನು ಥಿಯೇಟರಿನಲ್ಲಿ ಬಿಡುಗಡೆ ಮಾಡದೆ OTTಯಲ್ಲಿ ಬಿಡುಗಡೆ ಮಾಡಿದ ನಿರ್ಮಾಪಕರ ಧೈರ್ಯವು ಮೆಚ್ಚತಕ್ಕದ್ದೇ ಆಗಿದೆ.
“ನನಗೆ ಈ ಸಿನೆಮಾದ ಮೇಲೆ ಅಗಾಧ ವಿಶ್ವಾಸವಿದೆ. ನಾನು ಈವರೆಗೆ ಮಾಡಿದ್ದಕ್ಕಿಂತ ಡಿಫರೆಂಟ್ ಆದ ಪಾತ್ರ ಅದು. ನಾನು ಟ್ರಾನ್ಸ್ ಜೆಂಡರ್ ಪಾತ್ರವನ್ನು ಯಾವತ್ತೂ ಮಾಡಿರಲಿಲ್ಲ. ವಿಮರ್ಶಕರು ನನ್ನ ಫಿಲ್ಮನ್ನು ಇಷ್ಟ ಪಡದೆ ಹೋಗಬಹುದು. ಆದರೆ ಸಾಮಾನ್ಯ ಜನರು ಈ ಫಿಲ್ಮ್ ಇಷ್ಟ ಪಡುವುದು ಖಂಡಿತ. ಈ ಸಿನೆಮಾದಲ್ಲಿ ನಾವು ಬಳಸಿದ ವಿಶುವಲ್ಸ್, ಹಿನ್ನೆಲೆ ಸಂಗೀತ, ನಿರೂಪಣೆ ಎಲ್ಲವೂ ಅದ್ಭುತವೇ ಆಗಿದೆ. ಲಕ್ಷ್ಮೀ ಸೂಪರ್ ಹಿಟ್ ಆಗೋದು ಖಂಡಿತ” ಎಂದು ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ ಅಕ್ಷಯ್‌ ಕುಮಾರ್.

ತಮಿಳಿನಲ್ಲಿ ರಾಘವ್ ಲಾರೆನ್ಸ್ ಮಾಡಿದ ‘ ಕಾಂಚನ’ ಸಿನೆಮಾದ ರಿಮೇಕ್ ಇದು. ಹಿಂದಿ ಸಿನೆಮಾವನ್ನು ಕೂಡ ಲಾಘವ ಲಾರೆನ್ಸ್ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ತೃತೀಯ ಲಿಂಗಿ ವ್ಯಕ್ತಿ ಒಬ್ಬರು ದೌರ್ಜನ್ಯಕ್ಕೆ ಪ್ರಾಣ ಕಳೆದುಕೊಂಡು ಬೇರೊಬ್ಬರ ದೇಹವನ್ನು ಪ್ರವೇಶ ಮಾಡಿ ಸೇಡು ತೀರಿಸಿಕೊಳ್ಳುವ ಕಥೆ ಇದೆ. ಎರಡೂ ಪಾತ್ರಗಳನ್ನು ಅಕ್ಷಯ ಕುಮಾರ್ ಅದ್ಭುತವಾಗಿ ಮಾಡಿದ್ದಾರೆ. ಸಿನೆಮಾದ ದ್ವಿತೀಯಾರ್ಧದಲ್ಲಿ ಕತೆ ವೇಗವಾಗಿ ಓಡುತ್ತದೆ ಮತ್ತು ವೀಕ್ಷಕರನ್ನು
ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಅದರೊಂದಿಗೆ ಹೆಸರಿನ ಬಗ್ಗೆ ಇದ್ದ ವಿವಾದ ( ಲಕ್ಷ್ಮೀ ಬಾಂಬ್) ಸಿನೆಮಾಕ್ಕೆ ಭಾರೀ ಪ್ರಚಾರವನ್ನು ಕೊಟ್ಟಿದೆ. OTT ವೇದಿಕೆಯಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಫಿಲ್ಮ್ ಎಂಬ ದಾಖಲೆಯನ್ನು ಲಕ್ಷ್ಮೀ ಬರೆಯುವ ಸಾಧ್ಯತೆ ಇದೆ.



































































































error: Content is protected !!
Scroll to Top