ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು:ಘೋಷಣೆಯಷ್ಟೇ ಬಾಕಿ

ಬೆಂಗಳೂರು, ನ.10 : ತೀವ್ರ ಹಣಾಹಣಿಗೆ ಸಾಕ್ಷಿಯಾದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿಯ ರಾಜೇಶ್‌ ಗೌಡ ಅವರು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಸದ್ಯಕ್ಕೆ ಇಲ್ಲಿ ಗೆಲುವಿನ ಅಂತರ 11,000 ಅಧಿಕ ಮತಗಳು. ಮತ ಎಣಿಕೆ ಆರಂಭವಾದಾಗ ಬಿಜೆಪಿ ಮುನ್ನಡೆ ಸಾಧಿಸಿದರೂ ಬಳಿಕ ಕಾಂಗ್ರೆಸ್‌ ಕೂಡ ಬಲ ಹೆಚ್ಚಿಸುತ್ತಾ ಹೋಯಿತು. ಒಂದು ಹಂತದಲ್ಲಿ ಎರಡು ಪಕ್ಷಗಳ ನಡುವಿನ ಅಂತರ 1,900ಕ್ಕಿಳಿದಿತ್ತು. ನಂತರದ ಸುತ್ತಿನಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿತು. ಕ್ಷಣಕ್ಕೊಮ್ಮೆ ಅಂತರ ಬದಲಾಗುತ್ತಾ ಈ ಕ್ಷೆತ್ರ ಉದ್ದಕ್ಕೂ ತೀವ್ರ ಕುತೂಹಲ ಹುಟ್ಟಿಸಿತ್ತು. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆರ್‌ .ಆರ್.‌ ನಗರದಲ್ಲಿ ಜೆಡಿಎಸ್‌ಗೆ ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಶಿರಾದ ಗೆಲುವು ಬಿಜೆಪಿ ಪಾಲಿಗೆ ಅತ್ಯಂತ ವಿಶೇಷವಾಗಿದೆ. ಹಿಂದೆ ಒಮ್ಮೆಯೂ ಇಲ್ಲಿ ಬಿಜೆಪಿ ಗೆಲುವು ಕಂಡಿರಲಿಲ್ಲ. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಹಣಾಹಣಿ ನಡೆಯುತ್ತಿತ್ತು. ಬಿಜೆಪಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಿತ್ತು. ಆದರೆ ಉಪ ಚುನಾವಣೆ ಈ ಕಳಂಕವನ್ನು ತೊಡೆದು ಹಾಕಿದೆ. ಕೆಲ ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಕೆ. ಆರ್.‌ ಪೇಟೆಯಲ್ಲೂ ಬಿಜೆಪಿ ಇದೇ ಮಾದರಿಯ ಗೆಲುವು ಸಾಧಿಸಿತ್ತು. ಕೆ. ಆರ್. ಪೇಟೆ ಹಾಗೂ ಇದೀಗ ಶಿರಾ ಈ ಎರಡೂ ಕ್ಷೇತ್ರಗಳ ಗೆಲುವಿನ ರೂವಾರಿ ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಟ್.‌ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ.





























































































error: Content is protected !!
Scroll to Top