Sunday, October 17, 2021
spot_img
Homeಸ್ಥಳೀಯ ಸುದ್ದಿಕಾರ್ತಿಕ್‌ ಧ್ವನಿಸುರುಳಿ ಬಿಡುಗಡೆ

ಕಾರ್ತಿಕ್‌ ಧ್ವನಿಸುರುಳಿ ಬಿಡುಗಡೆ

ಕಾರ್ಕಳ : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನ ಹಾಡಿನ ಮೂಲಕ ಪ್ರಸಿದ್ಧಿ ಪಡೆದ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಧ್ವನಿಸುರುಳಿ ಕರಿಯಜ್ಜ ನ. 9ರಂದು ಮುಂಡ್ಕೂರು ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಡಮರುಗ ಕ್ರಿಯೇಶನ್ಸ್‌ನವರ ಧ್ವನಿಸುರುಳಿಯನ್ನು ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಹಾಗೂ ಶಾಂತಾ ದಿವಾಕರ ಪೂಜಾರಿ ಬಿಡುಗಡೆಗೊಳಿಸಿದರು.

ನಾಚಿದ ಕಾರ್ತಿಕ್
ಹಾಡಿನ ಮೂಲಕವೇ ಎಲ್ಲಡೆಗೆ ಪ್ರಸಿದ್ಧಿಗೆ ಬಂದ ಕಾರ್ತಿಕ್‌ಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ತಿಕ್‌ ಹಾಡಿದ ಹಾಡು ವೈರಲ್‌ ಆಗುತ್ತಿದೆ. ಧ್ವನಿಸುರುಳಿ ಬಿಡುಗಡೆ ಸಂದರ್ಭ ಕಾರ್ತಿಕ್‌ ಫೋಟೋವನ್ನು ಛಾಯಾಗ್ರಾಹಕರು ಕ್ಲಿಕ್ಕಿಸುವ ಸಂದರ್ಭ ಮುಖಕ್ಕೆ ಕೈ ಅಡ್ಡವಿಟ್ಟ ಬಾಲಕ ನಾಚಿ ನೀರಾದ ದೃಶ್ಯ ನೆರೆದವರಲ್ಲಿ ಪುಳಕವನ್ನುಂಟು ಮಾಡಿತು.

ವೆಬ್‍ಸೈಟ್ ಬಿಡುಗಡೆ
ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ವೆಬ್‍ಸೈಟ್ ಅನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ವೆಬ್‍ಸೈಟ್ ಬಿಡುಗಡೆಗೊಳಿಸಿದರು. ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ, ದೈವಾರಾಧಕರ ಸಂಘದ ಅಶೋಕ್ ಶೆಟ್ಟಿ, ಗಾಯಕಿ ಚೈತ್ರಾ ಕಲ್ಲಡ್ಕ, ಡಮರುಗ ತಂಡದ ಜಿ.ಎಸ್. ಗುರುಪುರ, ನಿರೂಪಕ ಮಧುರಾಜ್ ಗುರುಪುರ, ಸುಶಾಂತ್ ಚಕ್ರಪಾಣಿ, ಶರತ್ ಶೆಟ್ಟಿ ಹಾಗೂ ಮಧುರಾಜ್ ಕಲ್ಲಡ್ಕ, ವೆಬ್‍ಸೈಟ್ ಡಿಸೈನರ್ ಯಶು ಐಕಳ, ಕಾರ್ತಿಕ್‍ನ ಹೆತ್ತವರಾದ ಪೂವಪ್ಪ ಹಾಗೂ ಲೋಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!