ಕಾರ್ಕಳ : ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ ಇದರ ವಾರ್ಷಿಕ ಮಹಾಸಭೆಯು ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಶ್ರೀ ವರದೇಂದ್ರ ಸದನದಲ್ಲಿ ಅ. 27ರಂದು ನಡೆಯಿತು. ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ತರಬೇತಿ ಗೈಡ್ ಆಯುಕ್ತೆ ಶಾವಿತ್ರಿ ಮನೋಹರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿದ್ದಪ್ಪ, ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ, ಪದಾಧಿಕಾರಿಗಳಾದ ಹರಿಶ್ಚಂದ್ರ ರಾವ್, ಗೀತಾ ಸುಧೀರ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ನವೀನ್ ಎ., ಆನಂದ ಪೂಜಾರಿ, ಶಕೀಲಾ, ಪ್ರಮೀಳಾ ಮೊದಲಾದವರು ಭಾಗವಹಿಸಿದ್ದರು. ಯಶೋದಾ ಹೆಗ್ಡೆ ಸ್ವಾಗತಿಸಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಜಾಲ್ಸೂರು ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ನರೇಂದ್ರ ಕಾಮತ್ ನಿರೂಪಿಸಿ, ಲಕ್ಷ್ಮೀ ಹೆಗ್ಡೆ ವಂದಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮಹಾಸಭೆ


































