ನಮ್ಮ ಆರೋಗ್ಯಕ್ಕೆ ಹೆಚ್ಚಿನ ಶಕ್ತಿ ನೀಡುವುದರಲ್ಲಿ ಎಲ್ಲ ತರಕಾರಿ ಹಣ್ಣುಗಳು ಮುಖ್ಯವಾಗಿರುತ್ತದೆ. ಅದರಲ್ಲಿ ಅಗ್ರ ಸ್ಥಾನದಲ್ಲಿರುವುದು ಹಾಗೂ ಎಲ್ಲರ ಫೇವರೆಟ್ ತರಕಾರಿ ಕ್ಯಾರಟ್. ನಮ್ಮ ದೇಹಕ್ಕೆ ಬೇಕಿರುವ ಪ್ರೊಟೀನ್, ವಿಟಮಿನ್, ಪೊಟ್ಯಾಷಿಯಂ, ಕಾರ್ಬೋಹೈಡ್ರೇಟ್ಸ್ ಇದರಿಂದ ಸಿಗುತ್ತದೆ.
- ಜೀರ್ಣಕ್ರಿಯೆ
ಕ್ಯಾರಟ್ ನಲ್ಲಿರುವ ಕಾರ್ಬೋಹೈಡ್ರೇಟ್ಸ್ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. - ಮಲಬದ್ಧತೆ
ಕ್ಯಾರಟ್ ನಲ್ಲಿರುವ ನಾರಿನಂಶ ಮಲಬದ್ಧತೆ ಕಡಿಮೆಗೊಳಿಸಿ, ರಕ್ತ ಸಂಚಾರ ಹಾಗೂ ಆಹಾರ ಚಲನೆ ಸುಲಭಗೊಳಿಸುತ್ತದೆ. - ಶ್ವಾಸಕೋಶ ಸಮಸ್ಯೆ
ಕ್ಯಾರಟ್ ನಲ್ಲಿರುವ ವಿಟಮಿನ್ ‘ ಎ’ ಶ್ವಾಸಕೋಶ ಸಮಸ್ಯೆ ನಿವಾರಣೆಯಾಗಲು ಸಹಾಯ ಮಾಡುತ್ತದೆ. - ಮೂಳೆಗಳು
ನಮ್ಮ ಮೂಳೆಗಳಿಗೆ ಬಲ ನೀಡುವ ಮಿನರಲ್ಸ್ ಗಳನ್ನು ಹೊಂದಿರುವ ಕ್ಯಾರಟ್ ನಮ್ಮ ಮೂಳೆಗಳಿಗೆ ಅತಿ ಅಗತ್ಯ. - ಕ್ಯಾನ್ಸರ್
ಕ್ಯಾರಟ್ ನಲ್ಲಿರುವ ಆಂಟಿಆಕ್ಸಿಡೆಂಟ್ ಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕ್ಯಾನ್ಸರ್ ನಂತಹ ರೋಗದ ವಿರುದ್ಧ ಹೋರಾಡುತ್ತದೆ. - ಕಣ್ಣಿನ ಆರೋಗ್ಯ
ಕ್ಯಾರೆಟ್ ನಲ್ಲಿರುವ ವಿಟಮಿನ್ ‘ಎ’ ಮಕ್ಕಳ ಕಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. - ತೂಕ ಇಳಿಕೆ
ಕ್ಯಾರೆಟ್ ನಲ್ಲಿರುವ ನಾರಿನಾಂಶವು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗೂ ಆಹಾರದಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ. - ಚರ್ಮ
ಕ್ಯಾರೆಟ್ ನಲ್ಲಿರುವ ಕೆರೋಟಿನ್ ಅಂಶ ತ್ವಚೆಗೆ ಪೋಷಣೆ, ಕಾಂತಿ ನೀಡುತ್ತದೆ.
ಕೃಪೆ : ಜಾಗೃತಿ ಫೌಂಡೇಶನ್ ಕಾರ್ಕಳ































