ಉಡುಪಿ, ಅ.18: ಗೇರುಬೀಜ ಫ್ಯಾಕ್ಟರಿಯ ಮಾಲಕರಾಗಿರುವ ದಂಪತಿ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಕರ್ಣಾಟಕ ಬ್ಯಾಂಕಿನ ಸಿದ್ದಾಪುರ ಶಾಖೆಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿದ್ದಾಪುರದ ಗಜಾನನ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ರಾಘವೇಂದ್ರ ಹೆಮ್ಮಣ್ಣ ಮತ್ತು ಪತ್ನಿ ಆಶಾಕಿರಣ ಹೆಮ್ಮಣ್ಣ ಈ ವಂಚನೆ ಎಸಗಿದ್ದಾರೆ. ಖಾಸಗಿ ಕಂಪೆನಿಯೊಂದನ್ನು ತೆರೆದು ಸುಮಾರು 11 ಕೋ.ರೂ. ವ್ಯವಹಾರ ಇದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚಿಸಿದ್ದಾರೆಂದು ಸಿದ್ದಾಪುರ ಶಾಖಾ ಪ್ರಬಂಧಕ ಪೊಲೀಸ್ ದೂರು ದಾಖಲಿಸಿದ್ದಾರೆ.
ನಕಲಿ ದಾಖಲೆಪತ್ರಗಳ ಆಧಾರದಲ್ಲಿ ಬ್ಯಾಂಕ್ ಈ ದಂಪತಿಗೆ ಸುಮಾರು 6.70 ಕೋ.ರೂ. ಸಾಲ ನೀಡಿತ್ತು. ಸಾಲದ ಕಂತು ಪಾವತಿಯಾಗದೆ ಇದ್ದಾಗ ಕಂಪೆನಿಯ ವೆಬ್ ಸೈಟ್ ಪರಿಶೀಲಿಸಿದಾಗ ವಹಿವಾಟು ಬರೀ 15 ಲ.ರೂ. ಮಾತ್ರ ಇರುವುದು ಪತ್ತೆಯಾಗಿದೆ.












