ಬಜಗೋಳಿ ಧರ್ಮಶಾಲೆಗೆ ಬಾಹುಬಲಿ ವಿಗ್ರಹ

ಕಾರ್ಕಳ, ಅ. 18: ಜೈನ ಪರಂಪರೆಯ  ಮುಡಾರು ಗ್ರಾಮ ಬಜಗೋಳಿ ಸುಮ್ಮ ಗುತ್ತು ಬಂಡಸಾಲೆಯ  ಧರ್ಮಶಾಲೆ ಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಹುಬಲಿ ಮೂರ್ತಿಯನ್ನು  ಅ.19ರಂದು ಮೂಡಬಿದಿರೆಯಿಂದ ಕೊಂಡೊಯ್ಯಲಾಗುವುದು.  15.5 ಅಡಿ ಎತ್ತರದ  ಭಗವಾನ್ ಬಾಹುಬಲಿಯ ಮೂರ್ತಿಯನ್ನು 2014ರಲ್ಲಿ ನಿರ್ಮಿಸಲಾಗಿದೆ.

ಪ್ರತಿಮೆಯ ವಿಹಾರ  ಮಧ್ಯಾಹ್ನ 1.30 ಕ್ಕೆ  ಮೂಡುಬಿದಿರೆ ಶ್ರೀ ಜೈನ ಮಠದ ಪರಿಸರದಿಂದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ  ಆಶೀರ್ವಾದಗಳೊಂದಿಗೆ  ಹೊರಡಲಿದೆ. ಸಂಜೆ 4 ಗಂಟೆಗೆ ಬಜಗೋಳಿ ಅಪ್ಪಾಯಿ ಬಸದಿಯಲ್ಲಿ ಅಭಿಷೇಕ ಪೂಜೆ ನೆರವೇರಿಸಿ ಸಂಜೆ  5ಕ್ಕೆ ಬಜಗೋಳಿ  ಸುಮ್ಮ ಗುತ್ತು ಬಂಡಸಾಲೆ, ಧರ್ಮ ಶಾಲೆಗೆ ಪುರ ಪ್ರವೇಶವಾಗಲಿದೆ.  ಸಂಜೆ 6.30ರಿಂದ ಧರ್ಮ ಶಾಲೆ ಟ್ರಸ್ಟ್ ವತಿಯಿಂದ  ಭರತ -ಬಾಹುಬಲಿ ಯಕ್ಷಗಾನ ತಾಳ ಮದ್ದಳೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಸೀಮಿತ ಆಹ್ವಾನಿತರ ಉಪಸ್ಥಿತಿ ಯಲ್ಲಿ ಜರುಗಲಿರುವುದು ಎಂದು ಮೂಡುಬಿದಿರೆ ಜೈನಮಠದ ವ್ಯವಸ್ಥಾಪಕ ಸಂಜಯ್‌ ಕುಮಾರ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. .























error: Content is protected !!
Scroll to Top