ಪ್ರಾಣಕ್ಕಿಂತ ಓಟು ಅಮೂಲ್ಯವೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಬಹಳ  ಮಹತ್ವ ಇದೆ.ಆದರೆ ಅದಕ್ಕೂ ಸಮಯ ಸಂದರ್ಭ ಅನ್ನುವುದು ಇಲ್ಲವೇ ಎಂಬ ಪ್ರಶ್ನೆ ಇಂದಿನ ಕೊರೊನ ವಿಷಮಸ್ಥಿತಿಯಲ್ಲಿ ಸಹಜವಾಗಿ ಮೂಡುವ ಪ್ರಶ್ನೆ.

ಕನಾ೯ಟಕದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಾದ ಆರ್.ಆರ್.ನಗರ ಮತ್ತು ಶಿರಾ ಹಾಗೂ ಕೆಲವು ವಿಧಾನ ಪರಿಷತ್ ಸ್ಥಾನಗಳಿಗೆ ನಡೆಸುತ್ತಿರುವ ಚುನಾವಣೆ ಅದೇ ರೀತಿಯಲ್ಲಿ ಗ್ರಾಮ ಪಂಚಾಯತ್ ಗಳಿಗೆ ಇದೇ ಡಿಸೆಂಬರ್ ತಿಂಗಳೊಳಗೆ ಚುನಾವಣೆ ನಡೆಸ ಬೇಕೆಂಬ ಒತ್ತಾಯದ ಮಾತು ರಾಜ್ಯ ಸರಕಾರದಿಂದ ಹೊರ ಬಿದ್ದಿದೆ .

ಜನರ ಬದುಕೇ ಕೊರೊನದಿಂದ ತತ್ತರಿಸಿ ಹೋಗಿದೆ.ಜೀವವನ್ನು ಕೆೈಯಲ್ಲಿ ಹಿಡಿದು ತಿರುಗುವ ಪರಿಸ್ಥಿತಿ.ಇಂತಹ ಹದಗೆಟ್ಟ  ಪರಿಸ್ಥಿತಿಯಲ್ಲಿ ಮತದಾರರು ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಸಂದರ್ಭದಲ್ಲಿ ಕೊರೊನಕ್ಕೆ ತುತ್ತಾದರೆ ಇದಕ್ಕೆಲ್ಲ ಜವಾಬ್ದಾರಿ ಹೊರುವವರು ಸರಕಾವೇ ರಾಜ್ಯ ಚುನಾವಣಾ ಆಯೋಗವೇ ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಬರುತ್ತವೆ .

ಜನರ ಪ್ರಾಣವನ್ನೇ ಒತ್ತೆ ಇಟ್ಟು  ಚುನಾವಣೆ ನಡೆಸುವ ಅಗತ್ಯವಾದರೂ ಏನಿದೆ?

ಕೊರೊನದಿಂದಾಗಿ ಆಥಿ೯ಕ ಸ್ಥಿತಿ  ನಲುಗಿ ಹೋಗಿದೆ;ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿ ಎಂಟು ತಿಂಗಳುಗಳೇ ಕಳೆದು ಹೋಗಿತು; ಅಗತ್ಯ ಹುದ್ದೆಗಳು ಇನ್ನೂ ಖಾಲಿ ಖಾಲಿಯಾಗಿವೆ;ಸರಕಾರಿ ನೌಕರರಿಗೆ ಸಂಬಳ ಕೊಡುವುದೇ ಕಷ್ಟ ಎಂಬ ಪರಿಸ್ಥಿತಿ. ಇಷ್ಟೆಲ್ಲಾ ವಿಷಮಸ್ಥಿತಿಯಲ್ಲಿ ಕನಾ೯ಟಕದಲ್ಲಿ ಚುನಾವಣೆ ನಡೆಸುವ ಅಗತ್ಯವಾದರೂ ಏನು?

ಈಗ ನಡೆಯುವ ಉಪ ಚುನಾವಣೆ ಸರಕಾರದ ಸ್ಥಿರತೆಗಾಗಲಿ ಅಸ್ಥಿರತೆಗಾಗಲಿ ಯಾವುದೇ ಪರಿಣಾಮವೂ ಬೀರುವುದಿಲ್ಲಅನ್ನುವಾಗ ಈ ತರಾತುರಿಯಲ್ಲಿ ಚುನಾವಣೆ ನಡೆಸುವ ಅಗತ್ಯ ಖಂಡಿತವಾಗಿಯೂ ಇಲ್ಲ .

ನಮ್ಮ ರಾಜಕಾರಣಿಗಳಿಗೆ ಚುನಾವಣೆ ನಡೆಯದಿದ್ದರೆ ಉಸಿರಾಡುವುದೇ ಕಷ್ಟ ಅನ್ನುವ ತರದಲ್ಲಿ ನಮ್ಮ ಪ್ರಜಾಪ್ರಭುತ್ವ  ನಡೆಸುತ್ತಿರುವುದು ಅತ್ಯಂತ ಖೇದಕರ.ಅವರ ಸಂಬಳ ಸಾರಿಗೆ ಸವಲತ್ತುಗಳಿಗೆ ಯಾವುದೇ ಕೊರತೆ ಬಾರದ ಹಾಗೆ ಪಕ್ಷಭೇದ ಮರೆತು ವತಿ೯ಸುತ್ತಿದ್ದಾರೆ ಅನ್ನುವುದು ಜನರ ಅಸಹಾಯಕತೆಗೆ ಹಿಡಿದ ಕೆೈಗನ್ನಡಿ.

ಸ್ವಾಯತ್ತತೆಯ ಚುನಾವಣಾ ಆಯೋಗವಾದರೂ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡ ಬಹುದಿತ್ತು.ಅದನ್ನೂ ಮಾಡಲಿಲ್ಲ. ಕೊನೆಗೂ ನಮ್ಮೆಲ್ಲರ ಹಕ್ಕು, ಜೀವಕ್ಕೆ ರಕ್ಷಣೆ ಕೊಡಬೇಕಾದ ನ್ಯಾಯಾಲಯದಲ್ಲಿ ಯಾರೂ ಪ್ರಶ್ನೆ ಮಾಡಿದ ಹಾಗೆ ಕಾಣುವುದಿಲ್ಲ. ಕೆಲವರಿಗಂತೂ ಚುನಾವಣೆ ನಡೆದರೆ ಮಾತ್ರ ಅವರ ಬದುಕು ‍ಸಂಪನ್ನಗೊಳ್ಳುವುದು. ಹಾಗಾಗಿ ಅವರೂ ಮೌನವಾಗಿ ಬಿಟ್ಟಿದ್ದಾರೆ. ಪ್ರಬುದ್ಧ ಮತದಾರ ಮೌನಕ್ಕೆ ಶರಣಾಗಿ ಬಿಟ್ಟಿದ್ದಾನೆ.

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ



































































































error: Content is protected !!
Scroll to Top