ಮಾಳ : ಅಕ್ರಮವಾಗಿ ಮರ ಸಾಗಾಟ-ಚಾಲಕ ವಶಕ್ಕೆ

ಕಾರ್ಕಳ : ಅಕ್ರಮವಾಗಿ ಕಿರಾಲುಭೋಗಿ ಮರಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಕೆರ್ವಾಶೆ ಗ್ರಾಮದ ಉಮೇಶ್‌ (42) ಎಂಬವರನ್ನು ಮಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಅ. 5ರ ಬೆಳಗಿನ ಜಾವ ಅರಣ್ಯ ಸಿಬ್ಬಂದಿಯವರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪಿ.ಕೆ.ಎಂ., ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಮಂಜುನಾಥ ಗಾಣಿಗ, ಪ್ರಕಾಶ್ ಶೆಟ್ಟಿ, ಅರಣ್ಯ ರಕ್ಷಕರಾದ ನಾಗರಾಜ, ಸಂತೋಷ ದೇವಾಡಿಗ, ಅರಣ್ಯ ವೀಕ್ಷಕ ಶಿವಾನಂದ ಬಗಲಿ ಇದ್ದರು. ಆರೋಪಿಯನ್ನು ವಿಚಾರಣೆ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.















































































































































error: Content is protected !!
Scroll to Top