ಕಾರ್ಕಳ : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕಾರ್ಕಳ ಕ್ಷೇತ್ರ ಬಿಜೆಪಿ ವತಿಯಿಂದ ಒಂದು ವಾರದ ಸೇವಾ ಸಪ್ತಾಹ ಕಾರ್ಯಕ್ರಮಕ್ಕೆ ಸೆ. 15ರಂದು ನಗರದ ಮಾರಿಗುಡಿ ದೇಗುಲದ ವಠಾರದಲ್ಲಿ ಶಾಸಕ ವಿ. ಸುನಿಲ್ ಕಮಾರ್ ಚಾಲನೆ ನೀಡಿದರು. ಈ ಸಂದರ್ಭ ಸುಮಾರು 38 ಪೌರ ಕಾರ್ಮಿಕರಿಗೆ ವಸ್ತ್ರ ವಿತರಣೆ ಮಾಡಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಪ್ರಕಾಶ್ ರಾವ್, ನಗರ ಬಿಜೆಪಿ ಅಧ್ಯಕ್ಷ ರೆಂಜಾಳ ಅನಂತಕೃಷ್ಣ ಶೆಣೈ, ಪುರಸಭಾ ಸದಸ್ಯ ಯೋಗೀಶ್ ದೇವಾಡಿಗ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್, ಉಪಾಧ್ಯಕ್ಷ ಯೋಗೇಶ್ ನಾಯಕ್, ನಗರ ಮಹಿಳಾ ಬಿಜೆಪಿ ಅಧ್ಯಕ್ಷೆ ಸುಮಾ ರವಿಕಾಂತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಸೇವಾ ಸಪ್ತಾಹಕ್ಕೆ ಚಾಲನೆ





















