ಬೆಂಗಳೂರು, ಸೆ.3: ಕಾಶ್ಮೀರದ ಕೊರೊನಾ ಸೋಂಕಿತ 60 ವರ್ಷದ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಒದಗಿಸಲು ಬೆಂಗಳೂರಿನಿಂದ ವಿಮಾನದ ಮೂಲಕ ಶ್ರೀನಗರಕ್ಕೆ ಪ್ಲಾಸ್ಮಾ ರವಾನಿಸಲಾಗಿದೆ.
ಮಹಿಳೆ ಶ್ರೀನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಉಲ್ಬಣಿಸಿದಾಗ ಸಂಬಂಧಿಕರು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್ ಸಂಪರ್ಕಿಸಿದ್ದರು.
ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್‌ನ ಮುಖ್ಯಸ್ಥ ಡಾ. ವಿಶಾಲ್ ರಾವ್ ನೇತೃತ್ವದ ವೈದ್ಯರ ತಂಡವು ಎರಡು ಯುನಿಟ್ ಪ್ಲಾಸ್ಮಾವನ್ನು 3 ಸಾವಿರ ಕಿ.ಮೀ. ದೂರದಲ್ಲಿರುವ ರೋಗಿಗೆ ಇಂಡಿಗೊ ಕಾರ್ಗೊ ವಿಮಾನದ ಮೂಲಕ ಮಂಗಳವಾರ ತಲುಪಿಸಿದೆ. ವಿಮಾನವು ಬೆಂಗಳೂರಿನಿಂದ ದಿಲ್ಲಿ ಮಾರ್ಗವಾಗಿ ಶ್ರೀನಗರ ತಲುಪಿದೆ.




















