ಪ್ರಶಾಂತ್‌ ಭೂಷಣ್‌ಗೆ 1 ರೂ. ದಂಡ

ದಿಲ್ಲಿ , ಆ. 31: ಸುಪ್ರೀಂ ಕೋರ್ಟ್‌ ಮತ್ತು ಮುಖ್ಯ ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿ ನ್ಯಾಯಾಂಗದ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಶಾಂತ್‌ ಭೂಷಣ್‌ ಗೆ ನ್ಯಾಯಾಲಯ 1 ರೂ. ದಂಡ ವಿಧಿಸಿದೆ.

ಭೂಷಣ್‌ ದಂಡದ ಮೊತ್ತವನ್ನು ಸೆ.15ರೊಳಗೆ ಪಾವತಿಸದಿದ್ದರೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಮತ್ತು ಅವರಿಗೆ ಮೂರು ವರ್ಷ ವಕೀಲಿ ವೃತ್ತಿ ಕೈಗೊಳ್ಳದಂತೆ ನಿರ್ಬಂಧ ವಿಧಿಸಲಾಗುವುದು ಎಂದು ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿ ಹೇಳಿದೆ.

ಮುಖ್ಯ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟಿನ ವಿರುದ್ಧ ಭೂಷಣ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿತ್ತು.



















































error: Content is protected !!
Scroll to Top