ಸಂತೋಷ ಗುರೂಜಿ ಅಶ್ಲೀಲ ವೀಡಿಯೊ ನಕಲಿ : ವಕೀಲರ ಹೇಳಿಕೆ

ಉಡುಪಿ, ಆ.31:   ಬಾರ್ಕೂರು ಮಹಾಸಂಸ್ಥಾನದ ಸಂತೋಷ ಭಾರತಿ ಸ್ವಾಮೀಜಿ ಅವರ ವಿರುದ್ಧ ಅಪಪ್ರಚಾರಕ್ಕೆ ಬಳಸಲಾದ ವಿಡಿಯೊ ತುಣುಕುಗಳು ನಕಲಿ ಎಂದು ಸಾಬೀತಾಗಿದೆ. ಸ್ವಾಮೀಜಿ ಅವರ ತೇಜೋವಧೆಗೆ ಷಡ್ಯಂತ್ರ ನಡೆದಿರುವುದು ದೃಢವಾಗಿದೆ ಎಂದು ಸಂಸ್ಥಾನದ ವಕೀಲ ನಾಗರಾಜ ನಾಯಕ್‌  ತಿಳಿಸಿದ್ದಾರೆ.

‘ಕಳೆದ ವರ್ಷ ಜೂನ್‌ನಲ್ಲಿ ಸ್ವಾಮೀಜಿಯವರದ್ದು ಎನ್ನಲಾದ ಅಶ್ಲೀಲ ವೀಡಿಯೊ ನಮ್ಮ ಬಳಿ ಇದೆ ಎಂದು  ಕರೆಮಾಡಿ 10 ಕೋ.ರೂ.ಗೆ ಬೇಡಿಕೆ ಇಡಲಾಗಿತ್ತು. ಸ್ವಾಮೀಜಿ  ಈ ಕುರಿತು ದೂರು ನೀಡಿ   ವೈಜ್ಞಾನಿಕ ತನಿಖೆಗೆ ಆಗ್ರಹಿಸಿದ್ದರು.

ಮೂರು ವರ್ಷಗಳ ಹಿಂದೆ ಬೆಂಗಳೂರಿನ ಆಶ್ರಮದಲ್ಲಿ ಗನ್‌ಮ್ಯಾನ್ ಮತ್ತು ಇಬ್ಬರು ಕೆಲಸಗಾರರು ಸ್ವಾಮೀಜಿ ಅವರ ಕಪಾಟಿನಲ್ಲಿದ್ದ 3 ಲಕ್ಷ ನಗದನ್ನು ಕದ್ದು ಸಿಕ್ಕಿ ಬಿದ್ದಿದ್ದರು.  ಇದರಿಂದ ಸಿಟ್ಟಾಗಿದ್ದ ಗನ್‌ಮ್ಯಾನ್ ಸ್ವಾಮೀಜಿ ವಿರುದ್ಧ  ಹಗೆ ತೀರಿಸಿಕೊಳ್ಳಲು ಸಂಚು ಮಾಡಿದ್ದ ಎಂದು ನಾಗರಾಜ್‌ ಜಾಯಕ್‌ ತಿಳಿಸಿದ್ದಾರೆ.

ಸ್ವಾಮೀಜಿ ಅವರ ಆಗ್ರಹದಂತೆ  ಪೊಲೀಸರು ವಿಡಿಯೊವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು . ವಿಧಿ ವಿಜ್ಞಾನದ ವರದಿಯಲ್ಲಿ ದೃಶ್ಯಗಳನ್ನು ಎಡಿಟ್ ಮಾಡಲಾಗಿ, ಚಿತ್ರೀಕರಣದಲ್ಲಿ ನೈಜತೆ ಇಲ್ಲ ಎಂಬ ವರದಿ ನೀಡಿದ್ದಾರೆ.





















































error: Content is protected !!
Scroll to Top