ನಿತ್ಯ ಭವಿಷ್ಯ-18-08-2020

0

ಮೇಷ

ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಪಡೆಯುವಿರಿ. ದೈವಾನುಗ್ರಹ ವಿರುವುದರಿಂದ  ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.ಯಾವುದೇ ರೀತಿಯ ವಾದ – ವಿವಾದಗಳಿಂದ ಆದಷ್ಟು ದೂರವಿರಿ. ನಿಮ್ಮ ಅಪೇಕ್ಷಿತ ಸ್ಥಳಕ್ಕೆ ನೀವು ವರ್ಗಾವಣೆ ಗೊಳ್ಳುವಿರಿ.ಸೆಪ್ಟೆಂಬರ್ ನಂತರ ವಿದೇಶಕ್ಕೆ ಹೋಗುವ ಯೋಗ ನಿಮಗಿರುತ್ತದೆ.

ವೃಷಭ

ಜಮೀನಿನ ಮೇಲೆ ಹೂಡಿಕೆ ಮಾಡುವ ಮೊದಲು ಸರಿಯಾದ ರೀತಿಯಲ್ಲಿ ಯೋಚಿಸಿಕೊಳ್ಳಿರಿ. ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಇರುತ್ತದೆ.ಇದರಿಂದಾಗಿ ಮಾನಸಿಕ ಒತ್ತಡ ಎದುರಿಸಬೇಕಾಗುತ್ತದೆ.ನಿಮ್ಮ ಕೌಟುಂಬಿಕ ಜೀವನವೂ ನಿಮ್ಮ ವರ್ತನೆಯನ್ನು ಅವಲಂಬಿಸಿದೆ.

ಮಿಥುನ

ಅಷ್ಟಮದಲ್ಲಿ ಶನಿ ಇರುವುದರಿಂದ  ಯಾವುದೇ ವ್ಯವಹಾರದಲ್ಲಿ ದೊಡ್ಡ ಹೂಡಿಕೆ ಮಾಡಬೇಡಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೂ ಹೊಂದಿಕೊಂಡು ಹೋಗುತ್ತಿರುವುದರಿಂದ ಜೀವನವನ್ನು ಆನಂದಿಸುವಿರಿ.ಸೊಂಟ  ಹಾಗೂ ಕಾಲು ಗಂಟು ನೋವು ಇರುವುದರಿಂದ ವ್ಯಾಯಾಮದ  ಆವಶ್ಯಕತೆ ಬೇಕಾಗುತ್ತದೆ.

ಕರ್ಕಾಟಕ

ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧದಲ್ಲಿ ಅಪಸ್ವರ ಬರಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮ ಗೊಳ್ಳಲಿದೆ. ಅನಗತ್ಯ ವೆಚ್ಚಗಳಿಗೆ ಕೂಡಲೇ ಕಡಿವಾಣ ಹಾಕಿರಿ.ಭೂಮಿ ವ್ಯವಹಾರದವರಿಗೆ ಉತ್ತಮ ಲಾಭವಾಗುವ ಕಾಲವಿದು.ಸರಕಾರಿ ನೌಕರರು ಇಡೀ ವರ್ಷ ಗೊಂದಲಕ್ಕೆ ಗುರಿಯಾಗಲಿದ್ದಾರೆ.

ಸಿಂಹ 

ನಿಮ್ಮ ಅರ್ಧಕ್ಕೆ ನಿಂತಿರುವ ಕೆಲಸ ಇದೀಗ ಪೂರ್ಣಗೊಳ್ಳಲಿದೆ. ನಿಮ್ಮ ಪ್ರಗತಿಯ ಅನೇಕ ಅವಕಾಶಗಳು ನಿಮ್ಮ ಬಳಿಗೆ ತಾವಾಗಿಯೇ ಬರಲಿವೆ.ಇಂತಹ ಸಂದರ್ಭದಲ್ಲಿ ಯಾರೊಂದಿಗೂ ಅನಗತ್ಯ ವಾದ-ವಿವಾದ ಬೇಡ. ನಿಮ್ಮ ಪತ್ನಿಯೊಂದಿಗೆ ಸಣ್ಣ ಪುಟ್ಟ ವಿಷಯ ಗಳಲ್ಲಿ ಕಲಹ ವಾಗುವ ಸೂಚನೆ ಇದೆ. ನೀವು ಮೌನವಾಗಿರಿ.

ಕನ್ಯಾ 

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಣಗಳು.ಸಾಮಾನ್ಯವಾಗಿ ನಿಮ್ಮ ವ್ಯವಹಾರದಲ್ಲಿ ಕೆಲವು ಗೊಂದಲಗಳು  ಬರಲಿವೆ .ಸಹೋದ್ಯೋಗಿಗಳ ಜೊತೆಗೆ ಭಿನ್ನಾಭಿಪ್ರಾಯಗಳು ಬರಲಿವೆ.ಆದರೆ ಆರ್ಥಿಕವಾಗಿ ಬಹಳಷ್ಟು ಸುಧಾರಣೆಗಳನ್ನು ಕಾಣಲಿದ್ದೀರಿ.

ತುಲಾ

ನೀವು ಮನಸ್ಸಿನಲ್ಲಿ ಎಣಿಸಿರುವ ಕೆಲಸಗಳೆಲ್ಲವು ನೆರವೇರಲಿವೆ. ಆರೋಗ್ಯ ಸುಧಾರಿಸಲಿದೆ. ಆರ್ಥಿಕವಾಗಿ ನೀವು ಪ್ರಗತಿ ಹೊಂದಲಿದ್ದೀರಿ.ವ್ಯಾಪಾರದ ವಿಸ್ತರಣೆ  ಮಾಡಿ ಅದ್ಭುತ ಯಶಸ್ಸನ್ನು ಪಡೆಯಲಿದ್ದೀರಿ. ಯಾವುದೇ ವಿಷಯದಲ್ಲಿ ಉದ್ವೇಗ ಅಥವಾ ಜಗಳವಾಗುವ ಸಾಧ್ಯತೆ ಇದೆ. ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥಿಸಿರಿ.

ವೃಶ್ಚಿಕ

ನಿಮ್ಮ ಅನೇಕ ಹಳೆಯ ಸಮಸ್ಯೆಗಳು ಪರಿಹಾರವಾಗಲಿವೆ.ಕೆಲವು ನಿಮ್ಮ ಉತ್ತಮ ಮನಸಿನ  ಮಿತ್ರರ ಸಲಹೆ ಪಡೆಯಲು ಮರೆಯಬೇಡಿರಿ. ಉತ್ತಮವಾದ ದೈವಾನುಗ್ರಹ ಕೊಡುವ ಗುರು ಕೇತು  ಆದಾಯ ತರುವ ಶನಿ ಇರುವ ಕಾರಣ ಎಲ್ಲ  ವ್ಯವಹಾರಗಳು ನಿಮ್ಮ ಯೋಜನೆಯಂತೆ ನಡೆಯಲಿದೆ.ಹಲ್ಲು ನೋವು ಕೆಲವರಿಗೆ ಕಿರಿ ಕಿರಿ ತರಲಿದೆ. ನಾಗ ದೇವರನ್ನು ಪ್ರಾರ್ಥಿಸಿರಿ.

ಧನು

ಈ ದಿನ ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಆದಾಯ ಮಾತು ವೆಚ್ಚ ಸಮಾನವಾಗಲಿರುವುದರಿಂದ ವ್ಯವಹಾರ ಮಾಡುವಾಗ ಎಚ್ಚರ ವಹಿಸಬೇಕು. ಸಾಡೇಸಾತ್ ಶನಿಗಾಗಿ ಈಶ್ವರ ಅಥವಾ ವಿಷ್ಣು ದೇವರ ಪಾರಾಯಣ ದಿನ ನಿತ್ಯ ಮಾಡುತ್ತಾ ಬನ್ನಿರಿ .ಮನಸ್ಸಿನ ನೆಮ್ಮದಿಗಾಗಿ ಯೋಗ ಪ್ರಾಣಾಯಾಮವನ್ನುಮಾಡುತ್ತಾ  ಬನ್ನಿರಿ.

ಮಕರ

ನಿಮ್ಮ ರಾಶಿಯಲ್ಲಿ ಶನಿ ಇರುವುದರಿಂದ ಪ್ರತಿನಿತ್ಯ ಬೆಳಿಗ್ಯೆ 108 ಬಾರಿ ಶಿವ ಸ್ಮರಣೆ ಮಾಡಿ.  ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ಮಾಡಿರಿ.ಸ್ವಲ್ಪ ಸಿಟ್ಟು ಬಂದರೂ ಸಮಸ್ಯೆ ಆಗಬಹುದು. ಕೆಲಸವಿಲ್ಲದೆ ಅನಗತ್ಯ ತಿರುಗಾಡಬೇಡಿ.ಮಿತ್ರರ ಸಹಾಯ ಸಲಹೆ ಪಡೆಯಿರಿ. ಸರಕಾರಿ ನೌಕರರು ವಾದ -ವಿವಾದಗಳಿಂದ ದೂರವಿದ್ದರೆ ಒಳ್ಳೆಯದು.

ಕುಂಭ

ನಿಮಗೆ  ಸಾಡೇಸಾತ್ ಶನಿಯ ಕಾಟವಿದ್ದರೂ ಗುರು ಕೇತುವಿನ ಅನುಗ್ರಹ ವಿರುವುದರಿಂದ ನಿಮ್ಮ ಅನೇಕ ಅಡೆತಡೆಗಳು ನಿವಾರಣೆಯಾಗಲಿವ.ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗಲಿದೆ.ವೃಥಾ ಅಪವಾದ ನಿಂದನೆ ಬರದಂತೆ ನಿತ್ಯವೂ ರುದ್ರ ಜಪ ಮಾಡುತ್ತಾ ಬನ್ನಿರಿ.

ಮೀನ

ಶನಿ ಲಾಭ ಸ್ಥಾನದಲ್ಲಿ ಇರುವುದರಿಂದ ಅನೇಕ ರೀತಿಯಲ್ಲಿ ಧನಾಗಮನ ವಾಗಲಿದೆ. ಉದ್ಯೋಗ  ಪ್ರಾಪ್ತಿ  ಬಡ್ತಿ ಯೋಗವಿದೆ. ಕುಟುಂಬದ ಸದಸ್ಯರ ಜೊತೆಗೆ ದಿನದಲ್ಲಿ ಒಮ್ಮೆ ನಗುನಗುತ್ತಾ ಕಾಲಕಳೆಯುವುದು ನಿಮಗೆ ಅಗತ್ಯವಾಗಿದೆ.ಜೀವನದಲ್ಲಿ ಹಣ ಗಳಿಸುವುದೊಂದೇ ನಿಮ್ಮ ಗುರಿಯಾಗಿದೆ.ಸ್ವಲ್ಪ ನಿಮ್ಮ ಚಿಂತನೆಯನ್ನು ಬದಲಾಯಿಸಿಕೊಳ್ಳಿರಿ.

ಜ್ಯೋತಿಷ್ಯರು

 

ಕೆ. ಸುಬ್ರಹ್ಮಣ್ಯ ಆಚಾರ್ಯ

ಕಾರಿಂಜೇಶ್ವರ ಜ್ಯೋತಿಷ್ಯಾಲಯ, ಹಿರಿಯಂಗಡಿ ಕಾರ್ಕಳ.

97414 89529---
Previous articleಭಾರಿ ಮಳೆ : ಉಡುಪಿಗೆ ಯೆಲ್ಲೋ ಅಲರ್ಟ್‌
Next articleಕಗ್ಗದ ಸಂದೇಶ

LEAVE A REPLY

Please enter your comment!
Please enter your name here