ಕಂಗನಾ ನಿರ್ದೇಶನದಲ್ಲಿ ಬರಲಿದೆ ಅಯೋಧ್ಯಾ ಚಿತ್ರ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ  ಮೋದಿ ಭೂಮಿಪೂಜೆ ನೆರವೇರಿಸಿದ ಸನ್ನಿವೇಶವನ್ನು ಜಗತ್ತಿನಾದ್ಯಂತವಿರುವ ಭಾರತೀಯರು ನೋಡಿ ಪುಳಕಿತರಾಗಿದ್ದಾರೆ. ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ಮಂದಿರದ ದಿವ್ಯತೆ, ಮಹತ್ವ ಇತ್ಯಾದಿಗಳನ್ನು ಮೋದಿ ತಮ್ಮ ಭಾಷಣದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ.

ರಾಮನ ಕಟ್ಟಾ ಭಕ್ತೆಯಾಗಿರುವ ಅಂತೆಯೇ ಮೋದಿಯವರ ಅಭಿಮಾನಿಯಾಗಿರುವ ಕಂಗನಾ ರಣಾವತ್‌ ಭೂಮಿಪೂಜೆ ಕಾರ್ಯಕ್ರಮದಿಂದ ತುಸು ಹೆಚ್ಚೇ ಪ್ರಭಾವಿತರಾಗಿದ್ದಾರೆ. ಪ್ರತಿಯೊಂದು ಹೃದಯದಲ್ಲೂ ರಾಮನಿದ್ದಾನೆ, ಇಡೀ ದೇಶ ಈ ಈ ಕ್ಷಣವನ್ನು ನೋಡಿ ಭಾವಿಕವಾಗಿದೆ ಎಂದಿರುವ ಮೋದಿಯ ಮಾತನ್ನು ಕಂಗನಾ ಬಹಳ ಮೆಚ್ಚಿಕೊಂಡಿದ್ದಾರೆ.

ಒಟ್ಟು ಕಾರ್ಯಕ್ರಮ ಕಂಗನಾರನ್ನು ಎಷ್ಟು ಪ್ರಭಾವಿತಗೊಳಿಸಿದ್ದಾರೆ ಎಂದರೆ ಈ ಕುರಿತು ಒಂದು ಸಿನೇಮಾ ತಯಾರಿಸುವ ಯೋಚನೆ  ಮಾಡುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಕಂಗನಾ ನಾನು ನಿರ್ದೇಶಿಸುವ ಮುಂದಿನ ಚಿತ್ರದ ಕತೆ ರಾಮ ಮಂದಿರ ನಿರ್ಮಾಣದ್ದಾಗಿರುತ್ತದೆ ಎಂದಿದ್ದಾರೆ.

ನನ್ನ  ಪಾಲಿಗೆ ಅಯೋಧ್ಯೆ ಒಂದು ಸಂಕೇತ ಇದ್ದಂತೆ. ಇದಕ್ಕಾಗಿ ಶತಮಾನಗಳಿಂದ  ನಡೆದ ಹೋರಾಟ, ಅದು ನಾಗರಿಕ ಸಮಾಜದ ಮೇಲೆ ಬೀರಿದ ಪ್ರಭಾವ ನನ್ನನ್ನು ರೋಮಾಂಚನಗೊಳಿಸಿದೆ. ಹೆಚ್ಚು ವಿಳಂಬ ಮಾಡದೆ ಈ ಕತೆಯನ್ನು ತೆರೆಯ ಮೇಲೆ ತರಬೇಕು ಎಂದಿದ್ದಾರೆ.

ಚಿತ್ರಕ್ಕಾಗಿ ಅಯೋಧ್ಯೆಯ ಇತಿಹಾಸವನ್ನು ಕಂಗನಾ ಅಧ್ಯಯನ ಮಾಡಿದ್ದಾರೆ. ಬಾಬರನಿಂದ ಅಯೋಧ್ಯೆ ಮೇಲೆ ನಡೆದ ಆಕ್ರಮಣ, ಅಯೋಧ್ಯೆ ವಿಮೋಚನೆಗಾಗಿ ನಡೆದ 72 ಹೋರಾಟಗಳು ಇತ್ಯಾದಿ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ಅಯೋಧ್ಯೆಗಾಗಿ ಹೋರಾಡಿದ ಅನೇಕ ಮುಸ್ಲಿಮರು ಇದ್ದಾರೆ. ತನ್ನ ಚಿತ್ರದಲ್ಲಿ ಕಂಗನಾ ಅವರನ್ನೂ ತೋರಿಸುತ್ತಾರಂತೆ. ಅಯೋಧ್ಯೆ ಅನೇಕ ಮಂದಿಯ ತ್ಯಾಗ, ಬಲಿದಾನ ಮತ್ತು ದೃಢ ಸಂಕಲ್ಪದ ಕತೆ. ರಾಮ ರಾಜ್ಯ ಎನ್ನುವುದು ಬರಿ ಕಲ್ಪನೆಯಲ್ಲ, ಅದು ಪ್ರತಿ ಭಾರತೀಯನ ಕನಸು ಎನ್ನುತ್ತಾರೆ ಕಂಗನಾ.error: Content is protected !!
Scroll to Top