ಕಾರ್ಕಳ ಜೇಸಿಐ ಗೆ ಅತ್ಯುತ್ತಮ ಘಟಕ ಪ್ರಶಸ್ತಿ

ಕಾರ್ಕಳ : ಜೇಸಿಐ ಭಾರತ ವಲಯ 15ರ ಮಧ್ಯಾಂತರ ಸಮ್ಮೇಳನದಲ್ಲಿ ಜೇಸಿಐ ಕಾರ್ಕಳ ಘಟಕವು ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದಿದೆ. ಜೇಸಿಐ ಕಾರ್ಕಳ ನಡೆಸಿದ ಅಂತರ್ಜಲ ವೃದ್ಧಿ ಯೋಜನೆ, ಲಾಕ್‌ಡೌನ್‌ ಸಂದರ್ಭ ಅಗತ್ಯವುಳ್ಳ ಸುಮಾರು 60 ಕುಟುಂಬಗಳಿಗೆ ದಿನಬಳಕೆ ಕಿಟ್‌ ವಿತರಣೆ, ಆಧಾರ್‌ ಕಾರ್ಡ್‌ ನೋಂದವಣೆ ಮತ್ತು ತಿದ್ದುಪಡಿ ಮೊದಲಾದ ಸಮಾಜಮುಖಿ ಕಾರ್ಯಕ್ರಮ, ಸ್ವಚ್ಛಗೆ ನೀಡಿದ ಆದ್ಯತೆ ಮೊದಲಾದವುಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಶಂಕರಪುರದಲ್ಲಿ ಇತ್ತೀಚೆಗೆ ನಡೆದ ಜೇಸಿಐ ಭಾರತ ವಲಯ 15ರ  ಸಮ್ಮೇಳನದಲ್ಲಿ ಕಾರ್ಕಳ ಜೇಸಿಐ ಅಧ್ಯಕ್ಷ ದಿವಾಕರ ಎಂ. ಬಂಗೇರ ಮತ್ತು ತಂಡವನ್ನು ವಲಯ ಅಧ್ಯಕ್ಷ ಕಾರ್ತೀಕೇಯ ಮಧ್ಯಸ್ಥ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಸಮದ್‌ ಖಾನ್‌, ಕಾರ್ಯದರ್ಶಿ ದಿನೇಶ್‌ ನಾಯಕ್‌, ಜೆಜೆಸಿ ಅಧ್ಯಕ್ಷ ಸುಹಾಸ್‌ ಮತ್ತಿತರರು ಉಪಸ್ಥಿತರಿದ್ದರು.

ಅತ್ಯುತ್ತಮ ಘಟಕಾಧ್ಯಕ್ಷ
ಕಾರ್ಕಳ ಜೇಸಿಐ ಅಧ್ಯಕ್ಷ ದಿವಾಕರ ಎಂ. ಬಂಗೇರ ಅವರನ್ನು ವಲಯ 15ರ ಈ ವರ್ಷದ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ ನೀಡಿ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

error: Content is protected !!
Scroll to Top