ಮುಂಬಯಿ, ಆ. 6 : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತಣ್ಣಗಾಗುವ ಮೊದಲೇ ಇದೀಗ ಇನ್ನೊಬ್ಬ ನಟ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ.
ಕಿರುತೆರೆ ನಟ ಹಾಗೂ ಮೋಡೆಲ್ ಸಮೀರ್ ಶರ್ಮ (44) ಮಲಾಡ್ ಪಶ್ಚಿಮದ ಅಹಿಂಸಾ ಮಾರ್ಗದಲ್ಲಿರುವ ನೇಹಾ ಹೌಸಿಂಗ್ ಸೊಸೈಟಿಯಲ್ಲಿರುವ ತನ್ನ ಫ್ಲ್ಯಾಟಿನಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸಮೀರ್ ಶರ್ಮ ಕಳೆದ ಫೆಬ್ರವರಿಯಲ್ಲಷ್ಟೆ ಈ ಫ್ಲ್ಯಾಟಿಗೆ ಬಾಡಿಗೆಗೆ ಬಂದಿದ್ದರು. ಸೊಸೈಟಿಯ ಕಾವಲುಗಾರ ರಾತ್ರಿ ಗಸ್ತು ತಿರುಗುವಾಗ ಕಿಟಿಕಿಯಿಂದ ದೇಹ ನೇತಾಡುತ್ತಿರುವುದನ್ನು ಕಂಡು ಪೊಲೀಸರಿಗೆ ತಿಳಿಸಿದರು. ಎರಡು ದಿನ ಹಿಂದೆಯೇ ಶರ್ಮ ನೇಣು ಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಸಂಶಯಿಸಿದ್ದಾರೆ. ಅಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ.