ಕಾರ್ಕಳ : ರಶ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಜೇತ ವಸತಿಯುತ ವಿಶೇಷ ಶಾಲೆಗೆ ರೂ. 50 ಸಾವಿರ ದೇಣಿಗೆ ನೀಡಲಾಯಿತು. ರಶ್ಮಿ ಚಾರಿಟೇಬಲ್ ಅಧ್ಯಕ್ಷೆ ಸಾವಿತ್ರಿ ರಾಜು, ಟ್ರಸ್ಟ್ ನಿರ್ದೇಶಕ, ಉದ್ಯಮಿ ಡಿ. ಆರ್. ರಾಜು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರಿಗೆ ಹಸ್ತಾಂತರಿಸಿದರು. ಕರುಣಾಕರ್ ಶೆಟ್ಟಿ ದಾವಣಗೆರೆ, ಬಾಲಕೃಷ್ಣ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಶ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಸಾವಿರ ರೂ. ದೇಣಿಗೆ
