ಬೆಂಗಳೂರು, ಆ. 3:ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಶಾಲೆಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ಮಕ್ಕಳು ಬೇಗನೇ ವೈರಸ್ ಗೆ ತುತ್ತಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಆ.31ರ ವರೆಗೆ ರಾಜ್ಯದಾದ್ಯಂತ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಮುಚ್ಚತಕ್ಕದ್ದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. ಇದರಿಂದಾಗಿ ಶಾಲೆಗಳು ಯಾವಾಗ ಪ್ರರಾಂಭವಾಗುತ್ತದೆ ಎಂಬ ಮಕ್ಕಳ ಮತ್ತು ಅವರ ಹೆತ್ತವರ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ. ಆದರೆ ಕಾಲೇಜಿಗೆ ಸಂಬಂಧಪಟ್ಟಂತೆ ಸರಕಾರದಿಂದ ಇಷ್ಟರ ತನಕ ಯಾವುದೇ ಆದೇಶ ಹೊರಬಿದ್ದಿಲ್ಲ.
ಶಿಕ್ಷಣ ಇಲಾಖೆ ಈಗಾಗಲೇ ಚಂದನ ವಾಹಿನಿಯ ಮೂಲಕ ವರ್ಚುವಲ್ ತರಗತಿಗಳನ್ನು ಪ್ರಾರಂಭಿಸಿದ್ದರೂ ಇದು ಹಲವು ಅಡ್ಡಿ ಅಡಚಣೆಗಳಿಂದಾಗಿ ಇದು ಎಲ್ಲ ಮಕ್ಕಳಿಗೆ ಲಭ್ಯವಾಗುತ್ತಿಲ್ಲ.