ಉಡುಪಿ, ಆ.3 : ಕೊರೊನಾ ಪರಿಕರಗಳ ಖರೀದಿಯಲ್ಲಿ ಬಿಜೆಪಿ ಸರಕಾರ ಅವ್ಯವಹಾರ ನಡೆಸಿದೆ. ಇದನ್ನು ಬಿಜೆಪಿ ನಾಯಕರಾದ ಮುರುಗೇಶ್ ನಿರಾಣಿ ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಲೆಕ್ಕ ಕೊಡಲು ಸರಕಾರ ಹಿಂದೆ ಮುಂದೆ ನೋಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಉಡುಪಿಯಲ್ಲಿ ಆರೋಪಿಸಿದರು.
ಮಾಜಿ ಸಚಿವೆ ಜಯಮಾಲಾ ಜೊತೆಯಲ್ಲಿ ಇದ್ದರು. ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.