ಮ್ಯಾನ್ಮಾರ್‌ ಗಡಿಯಲ್ಲಿ ಉಗ್ರ ದಾಳಿ : ಮೂವರು ಭಾರತೀಯ ಯೋಧರು ಹುತಾತ್ಮ


ದಿಲ್ಲಿ, ಜು.30 : ಭಾರತ-ಮ್ಯಾನ್ಮಾರ್ ಗಡಿಯಿಂದ 3 ಕಿ.ಮೀ ದೂರದಲ್ಲಿರುವ ಖೊಂಗ್ಟಾಲ್‌ನಲ್ಲಿ ಅಸ್ಸಾಂ ರೈಫಲ್ಸ್‌ನ ಪಡೆಗಳು ಅಂತಾರಾಷ್ಟ್ರೀಯ ಗಡಿಯಲ್ಲಿ ಮೂರು ದಿನಗಳ ಕಾರ್ಯಾಚರಣೆಯ ನಂತರ ಮರಳುತ್ತಿದ್ದಾಗ ಸಂಜೆ 6: 30 ರಿಂದ 7:00 ರ ವೇಳೆಯಲ್ಲಿ ಮ್ಯಾನ್ಮಾರ್‌ನ ಗಡಿಯ ಸಮೀಪ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಸ್ಥಳೀಯ ಗುಂಪಿನ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸಿದ್ದಾರೆ.ಘಟನೆಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಗಸ್ತಿನಲ್ಲಿದ್ದ ಭಾರತೀಯ ಯೋಧರ ಮೇಲೆ ಭಯೋತ್ಪಾದಕರು ಐಇಡಿ ಸ್ಫೋಟಿಸಿದ್ದು ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ.
ಮೃತರನ್ನು ಹವಾಲ್ದಾರ್ ಪ್ರಣಯ್ ಕಲಿತಾ, ರೈಫಲ್ಮನ್ ವೈಎಂ ಕೊನ್ಯಾಕ್ ಮತ್ತು ರೈಫಲ್ಮನ್ ರತನ್ ಸಲೀಮ್ ಎಂದು ಗುರುತಿಸಲಾಗಿದೆ. ಸಣ್ಣ ಗಾಯಗಳಾಗಿರುವ  ಐವರು ಜವಾನರನ್ನು ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಯಾವುದೇ ಉಗ್ರ ಸಂಘಟನೆಯು ಈ ದಾಳಿಯ ಹೊಣೆಯನ್ನು ಇನ್ನೂ ವಹಿಸಿಕೊಂಡಿಲ್ಲ.error: Content is protected !!
Scroll to Top