ಉಡುಪಿ : ಕಳೆದ ಕೆಲವು ದಿನಗಳಿಂದ ಕಡಿಮೆ ಕೊರೊನಾ ಪ್ರಕರಣಗಳನ್ನು ಕಂಡಿದ್ದ ಉಡುಪಿ ಜಿಲ್ಲೆಯಲ್ಲಿಂದು ಬರೊಬ್ಬರಿ 281 ಕೊರೊನಾ ಪೊಸಿಟಿವ್ ಪ್ರಕರಣಗಳು ವರದಿಯಾಗಿವೆ. 135 ಮಂದಿಯ ವರದಿ ನೆಗೆಟಿವ್ ಬಂದಿದೆ. 467 ಮಂದಿಯ ವರದಿ ಬರಲು ಬಾಕಿಯಿದೆ. 189 ಮ<ದಿ ಐಸೊಲೇಶನ್ ವಾರ್ಡ್ ನಲ್ಲಿ ವಿಶೇಷ ನಿಗಾದಲ್ಲಿದ್ದಾರೆ.
ಒಂದೇ ದಿನ 281 ಮಂದಿಯ ವರದಿ ಪೊಸಿಟಿವ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಲಾಕ್ ಡೌನ್ ಬೆನ್ನಿಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಸಮುದಾಯ ಪ್ರಸರಣ ಶುರುವಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಇದೇ ವೇಳೆ ರಾಜ್ಯದಲ್ಲಿ ಇಂದು 4764 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲಿ 2050 ಪಾಸಿಟಿವ್ ಪ್ರಕರಣಗಳಿವೆ. ದ.ಕ.ಜಿಲ್ಲೆಯಲ್ಲಿ 62 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿಂದು ಒಟ್ಟು 55 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ.