ಜೆರ್ಸಿಯಲ್ಲಿ ವೈದ್ಯರ ಹೆಸರು –ಕೊರೊನಾ ವಾರಿಯರ್ಸ್ ಗೆ ಇಂಗ್ಲಂಡ್‌ ಕ್ರಿಕೆಟಿಗರ ವಿಶಿಷ್ಟ ಗೌರವ

ಲಂಡನ್: ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಲಿಳಿದಿರುವ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮ ಜೆರ್ಸಿಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ಹೆಸರು ಬರೆಯಿಸಿಕೊಂಡು ಗೌರವ ಸಲ್ಲಿಸುತ್ತಿದ್ದಾರೆ.

ಈ ವೇಳೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜೆರ್ಸಿಯಲ್ಲಿ ಭಾರತೀಯ ಮೂಲದ ವೈದ್ಯ ಡಾ. ವಿಕಾಸ್ ಕುಮಾರ್ ಎಂಬವರ ಹೆಸರು ಇರುವುದನ್ನು ಅಭಿಮಾನಿಗಳು ಪತ್ತೆ ಮಾಡಿದ್ದಾರೆ.
 
ಅರ್ಲಿಂಗ್ಟನ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ವಿಕಾಸ್ ಕುಮಾರ್ ದೆಹಲಿ ಮೂಲದವರು. ಭಾರತೀಯ ವೈದ್ಯನಿಗೆ ಇಂಗ್ಲೆಂಡ್ ನಾಯಕ ಗೌರವ ಸಲ್ಲಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.error: Content is protected !!
Scroll to Top