ವಾಷಿಂಗ್ಟನ್ : ಇತ್ತೀಚೆಗಷ್ಟೆ ವಲಸೆ ನಿಯಮಕ್ಕೆ ತಿದ್ದುಪಡಿ ಮಾಡಿ ಭಾರತೀಯರು ಸೇರಿದಂತೆ ಲಕ್ಷಗಟ್ಟಲೆ ಮಂದಿಯ ಡಾಲರ್ ಕನಸಿಗೆ ತಣ್ಣೀರು ಎರಚಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹೊಸ ನಿರಿಕ್ಷೆ ಹುಟ್ಟಿಸುವ ಸುದ್ದಿಯನ್ನು ನೀಡಿದ್ದಾರೆ.
ಪ್ರತಿಭೆ ಆಧಾರಿತ ಹೊಸ ವಲಸೆ ನಿಯಮ ರಚಿಸಲು ಟ್ರಂಪ್ ಹೇಳಿದ್ದಾರಂತೆ. ಹೊಸ ನಿಯಮದಲ್ಲಿ ಬಾಲ್ಯದಿಂದಲೇ ಅಮೆರಿಕದಲ್ಲಿದ್ದರೂ ಪೌರತ್ವ ವಂಚಿತರಾಗಿರುವವರಿಗೂ ಅನುಕೂಲವಾಗಲಿರುವ ಅಂಶಗಳಿವೆ ಎಂದು ಖಾಸಗಿ ಟಿವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಟ್ರಂಪ್ ಹೇಳಿಕೊಂಡಿದ್ದಾರೆ.
ಡಿಫರ್ಡ್ ಆಕ್ಷನ್ ಫಾರ್ ಚೈಲ್ಡ್ ವುಡ್ ಎರಾಯ್‌ವಲ್ಸ್ ಕಾರ್ಯಕ್ರಮದಡಿ ಪೌರತ್ವ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಇದೊಂದು ಬಹಳ ದೊಡ್ಡ ಮತ್ತು ಉತ್ತಮ ವಿಧೇಯಕ ಎಂದಿದ್ದಾರೆ ಟ್ರಂಪ್.