ಮುಂಬಯಿ : ಕೊರೊನಾ ನಿಯಂತ್ರಿಸುವಲ್ಲಿ ಧಾರಾವಿಯಲ್ಲಿ ಮಹಾರಾಷ್ಟ್ರ ಆಡಳಿತ ತೋರಿಸಿರುವ ಕ್ಷಮತೆ ವಿಶ್ವ ಆರೋಗ್ಯ ಸಂಸ್ಥೆಯ ಶ್ಲಾಘನೆಗೆ ಪಾತ್ರವಾಗಿದೆ.ಕೊರೊನಾ ಹರಡಲು ಶುರುವಾದ ಸಂದರ್ಭದಲ್ಲಿ ಆತಂಕ ಹುಟ್ಟಿಸಿದ್ದ ಧಾರಾವಿ ಕೊಳಿಗೇರಿಯಲ್ಲಿ ಈಗ ವೈರಸನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಕಾರ್ಯದರ್ಶಿ ಟಡ್ರೊಸ್ ಅಧನಂ ಕೊರೊನಾ ನಿಯಂತ್ರಿಸುವಲ್ಲಿ ಇಟಲಿ, ಸ್ಪೈನ್ , ದಕ್ಷಿಣ ಕೊರಿಯ ಜತೆಗೆ ಧಾರಾವಿ ಹೆಸರನ್ನು ಉಲ್ಲೇಖಿಸಿದ್ದಾರೆ.