ಸಖತ್ ವೈರಲ್ ಆಯಿತು ಮಾದಕ ಸುಂದರಿಯ ಫೊಟೊ
ಬಾಲಿವುಡ್ನ ಶೋಕಿಲಾಲ ನಿರ್ದೇಶಕ ರಾಮ್ ಗೋಪಾಲ್ ವರ್ಮ. ತನ್ನ ಪ್ರತಿ ಚಿತ್ರದಲ್ಲಿ ಹೊಸ ನಾಯಕಿಯರನ್ನು ಪರಿಚಯಿಸುವುದು ವರ್ಮನ ವೈಶಿಷ್ಟ್ಯ. ಹೀಗೆ ವರ್ಮ ಪರಿಚಯಿಸಿದ ನಾಯಕೆಯರ ದಂಡೇ ಬಾಲಿವುಡ್ ನಲ್ಲಿದೆ. ವರ್ಮ ಹೊಸ ಚಿತ್ರ ಘೋಷಿಸಿದಾಗಲೆಲ್ಲ ಹೀರೊಯಿನ್ ಯಾರು ಎಂಬುದರ ಬಗ್ಗೆ ಭಾರಿ ಚರ್ಚೆಯೇ ನಡೆಯುತ್ತದೆ. ಆ ಮಟ್ಟದ ಕ್ರೇಜನ್ನು ಹುಟ್ಟು ಹಾಕಿದ್ದಾನೆ ವರ್ಮ.
ಇದೀಗ ವರ್ಮ ಥ್ರಿಲ್ಲರ್ ಎಂಬ ಹೊಸ ಚಿತ್ರವೊಂದನ್ನು ಘೋಷಿಸಿದ್ದು, ಇದರ ನಾಯಕಿಯನ್ನು ನೋಡಿದ ಬಳಿಕ ಪಡ್ಡೆ ಹುಡುಗರ ನಿದ್ದೆ ಹಾರಿಹೋಗಿದೆ. ಒಡಿಶಾದ ಅಪ್ಸರಾ ರಾಣಿಯೇ ಈ ಹೊಸ ನಾಯಕಿ.ಹೆಸರಿಗೆ ತಕ್ಕಂತೆ ಧರೆಗಿಳಿದ ಅಪ್ಸರೆಯೇ ಸರಿ ಈಕೆ.
ಸೋಷಿಯಲ್ ಮೀಡಿಯಾದಲ್ಲಿ ವರ್ಮ ಹರಿಬಿಟ್ಟಿರುವ ಅಪ್ಸರಾಳ ಫೊಟೊಗಳು ಸಖತ್ ವೈರಲ್ ಆಗಿವೆ. ಈ ಮೊದಲು ಅಪ್ಸರಾ ಪಾಟ್ನಾಗಢ್ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾಳೆ.