ಮಿರ್ಚಿ & ಮೈಮ್ ಮತ್ತು ಮದಿರಾ & ಮೈಮ್ ಇವೆರಡು ಮುಂಬಯಿಯ ಶ್ರೀಮಂತರ ಬಡಾವಣೆಯಾಗಿರುವ ಪೊವಾಯಿಯ ಹೀರಾನಂದಾನಿ ಗಾರ್ಡನ್ ನಲ್ಲಿರುವ ಪ್ರತಿಷ್ಠಿತ ಹೊಟೇಲ್ ಗಳು. ರಾಜಶೇಖರ್ ರೆಡ್ಡಿ ಮತ್ತು ಶಿಶಿರ್ ಗೋರ್ಲೆ ಎಂಬಿಬ್ಬರ ಪಾಲಿದಾರಿಕೆಯ ಹೊಟೇಲ್ ಗಳಿವು.ರುಚಿ, ಗುಣಮಟ್ಡದಿಂದಾಗಿ ಅಲ್ಪ ಕಾಲದಲ್ಲೇ ಅಪಾರ ಯಶಸ್ಸು ಕಂಡಿದ್ದವು. ಒಂದೊಂದು ಹೊಟೇಲಿನಲ್ಲಿ ಪ್ರತಿ ತಿಂಗಳು ಕಡಿಮೆ ಎಂದರೂ 65-70 ಲ.ರೂ. ತನಕ ವ್ಯಾಪಾರವಿತ್ತು. ಎಲ್ಲ ಎ ಗ್ರೇಡ್ ಹೊಟೇಲ್ ಗಳಂಗೆ ಇದ್ದರೂ ಈ ಹೊಟೇಲ್ ಗೆ ತನ್ನದೇ ಆದ ವೈಶಿಷ್ಟ್ಯವಿದೆ.ಅದೇನೆಂದರೆ ಈ ಹೊಟೇಲ್ ಗಳ ನೌಕರರು ಕಿವುಡ ಮತ್ತು ಮೂಕರು.
2015 ಮತ್ತು 2017ರಲ್ಲಿ ಈ ಎರಡು ಹೊಟೇಲ್ ಗಳನ್ನು ಪ್ರಾರಂಭಿಸುವಾಗ ಮಾಲಕರಲ್ಲಿ ಸಮಾಜದ ದುರ್ಬಲ ವರ್ಗದವರಿಗಾಗಿ ಏನಾದರೂ ಮಾಡಬೇಕೆಂಬ ತುಡಿತವಿತ್ತು.ಅದರ ಫಲಿತಾಂಶವೇ ಕಿವುಡ ಉತ್ತು ಮೂಕರಿಗೆ ಹೊಟೇಲ್ ಗಳಲ್ಲಿ ನೌಕರಿ ನೀಡಿದ್ದು.
ಹಾಗೆಂದು ಮಾತು ಬಾರದ, ಕಿವಿ ಕೇಳಿಸದವರನ್ನು ಹೊಟೇಲ್ ನೌಕರಿಗೆ ಅಣಿಗೊಳಿಸುವುದು ಸುಇಭದ ಕೆಲಸವೇನೋ ಆಗಿರಲಸಲ್ಲ. ವಾರಗಟ್ಟಲೆ ತರಬೇತಿ ನೀಡಿದ ಹೊರತಾಗಿಯೂ ಆರಂಭದ ಒಂದೆರಡು ವಾರ ನೌಕರರು ಯಡಬಾರದ ಕಷ್ಟ ಪಟ್ಟಿದ್ದರು. ಕ್ರಮೇಣ ಎಲ್ಲ ಸರಿ ಹೋಗಿ ಎರಡೂ ಹೊಟೇಲ್ ಗಳು ಭರ್ಜರಿ ವ್ಯಾಪಾರ ಮಾಡಿಕೊಂಡಿದ್ದವು.ಹೊಟೇಲ್ ಗಳ ಸರ್ವಿಸ್ ಗೆ ಗ್ರಾಹಕರು ಮನಸೋತಿದ್ದರು.ವಾರಾಂತ್ಯ ಗಳಲ್ಲಿ ಟೇಬಲ್ ಮೊದಲೇ ಕಾದಿರಿಸಬೇಕಿತ್ತು. ಇದೆಲ್ಲ ಲಾಕ್ ಡೌನ್ ಮುಂಚಿನ ಕತೆ.
ಲಾಕ್ ಡೌನ್ ಆರಂಭವಾದ ಮೊಹಿ ತಿಂಗಳಲ್ಲೇ ಹೊಟೇಲಿನ ಲಾಭ 10% ಕ್ಕಿಳಿಯಿತು. ಎರಡು ಹೊಟೇಲ್ ಗಳು ಒಟ್ಟಾಗಿ ಪ್ರತಿ ತಿಂಗಳು ಸುಮಾರು 1.5 ಕೋ.ರೂ. ಗಳಿಸುತ್ತಿದ್ದವು. ಅದು 12 ಲಕ್ಷಕ್ಕಿಳಿಯಿತು. ತಿಂಗಳೊಂದಕ್ಕೆ 1 ಕೋ.ರೂ. ನಷ್ಟವಾಗತೊಡಗಿತು. ಈ ಪರಿಸ್ಥಿತಿಯಲ್ಲಿ ನೌಕರರನ್ನು ಕೈಬಿಡುವುದು ಅನಿವಾರ್ಯವಾಯಿತು. ಮಾಲಕರು ಮನಸ್ಸಿಲ್ಲದ ಮನಸ್ಸಿನಿಂದ ಹೆಚ್ಚಿನೆಲ್ಲ ನೌಕರರನ್ನು ಮನೆಗೆ ಕಳುಹಿಸಿದರು. ಇಷ್ಟಾಗಿಯೂ ಸಂಎಟ ಮುಗಿಯಲಿಲ್ಲ. ಕಟ್ಟೆದ ಮಾಲಕರು ಬಾಡಿಗೆ ಹಣಕ್ಕಾಗಿ ಪೀಡಿಸತೊಡಗಿದರು. ಇದೀಗ ಪಾಲುದಾರರು ತಾವು ಪ್ರೀತಿಯಿಂದ ಕಟ್ಟಿ ಬೆಳೆಸಿದ ಹೊಟೇಲುಗಳನ್ನೇ ಮಾರಾಟಕ್ಕಟ್ಡಿದ್ದಾರೆ.
ರೆಡ್ಡಿ ಮತ್ತು ಗೋರ್ಲೆ ಮೂಗ ಮತ್ತು ಕಿವುಡರಿಗೆ ವ್ಯಾವಹಾರಿಕ ತರಬೇತಿ ನೀಡಲೆಂದೇ ಏಕಲವ್ಯ ಫೌಂಡೇಶನ್ ಸ್ಥಾಪಿಸಿದ್ದರು. ಇಲ್ಲಿ ತರಬೇತಿ ಪಡೆದ 150 ಕ್ಕೂ ಅಧಿಕ ಕಿವುಡ ಮತ್ತು ಮೂಗರು ಅಮೆಜಾನ್, ಮಹೀಂದ್ರ, ಗೋದ್ರೆಜ್,ಗ್ರೋಫರ್ಸ್, ಇಂಡಿಯನ್ ಆಯಿಲ್ ಮುಂತಾದ ಕಂಪನಿಗಳಲ್ಲಿ ಉದ್ಯೋಗ ಗಳಿಸಿದ್ದಾರೆ. ಈಗ ಏಕಲವ್ಯ ಫೌಂಡೇಶನ್ ಗೂ ಗ್ರಹಣ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. ಈಗ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಝೀರೊ ಆಗಿದೆ ಎನ್ನುತ್ತಾರೆ ಹೊಟೇಲಿನ ಮಾಲಕರು. ಈದು ಒಂದು ಹೊಟೇಲಿನ ಕತೆಯಲ್ಲ ಮುಂಬಯಿಯ ಹೆಚ್ಚಿನೆಲ್ಲ ಹೊಟೇಲ್‌ಗಳ ಕತೆ.