ದೇಶದ ಮೊದಲ ಸ್ವದೇಶಿ ಸೋಷಿಯಲ್‌ ಮೀಡಿಯಾ app Elyments- ಏನಿದರ ವೈಶಿಷ್ಟ್ಯ?

0

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾನುವಾರ ಬಿಡುಗಡೆಗೊಳಿಸಿದ ದೇಶೀಯವಾಗಿ ಆಭಿವೃದ್ಧಿಪಡಿಸಿದ  ಮೊದಲ  ಸಾಮಾಜಿಕ ಮಾಧ್ಯಮ ಆಪ್ ‘ಎಲಿಮೆಂಟ್ಸ್ (Elyments).

ದಿಲ್ಲಿ:  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾನುವಾರ ಭಾರತದ ಮೊಟ್ಟಮೊದಲ ಸ್ವದೇಶೀ ನಿರ್ಮಿತ ಸಾಮಾಜಿಕ ಮಾಧ್ಯಮ app ಎಲಿಮೆಂಟ್ಸ್ (Elyments) ಬಿಡುಗಡೆಗೊಳಿಸಿದ್ದಾರೆ. ಬಳಕೆದಾರರು ಇದೀಗ ಈ app ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ವೆಂಕಯ್ಯ ನಾಯ್ಡು ಅವರು ಈ app ಅನ್ನು ಬಿಡುಗಡೆಗೊಳಿಸಿದ್ದಾರೆ. ಸಮಾರಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ  ರವಿಶಂಕರ್ ಗುರೂಜಿ ಕೂಡ ಉಪಸ್ಥಿತರಿದ್ದರು.

1 ಲಕ್ಷಕ್ಕೂ ಅಧಿಕ ಡೌನ್‌ ಲೋಡ್
ಈ app  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಸಲಡೌನ್‌ ಲೋಡ್‌ ಆಗಿದೆ. ಆರಂಭದಲ್ಲಿ ಈ app ದೇಶದ ಒಟ್ಟು 8 ಭಾಷೆಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ಆಡಿಯೋ-ವಿಡಿಯೋ ಕಾಲಿಂಗ್ ಸೌಲಭ್ಯ ಒದಗಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ವೈಶಿಷ್ಟ್ಯಗಳನ್ನು ಒಂದುಗೂಡಿಸಿ ಒಂದೇ app ನ ಅಡಿ ಬಳಕೆದಾರರಿಗೆ ನೀಡುವುದು ಈ app ನ ಪ್ರಮುಖ ಉದ್ದೇಶವಾಗಿದೆ.

ಖಾಸಗಿತನಕ್ಕೆ ಧಕ್ಕೆಯಿಲ್ಲ

App ಬಳಕೆದಾರರ ಖಾಸಗಿ ಮಾಹಿತಿಗಳನ್ನು ರಕ್ಷಿಸಲು ಸಮರ್ಥವಾಗಿದೆಯೇ ಎಂಬ  ಅನುಮಾನ ವ್ಯಕ್ತವಾಗಿದ್ದು,ಇದಕ್ಕೆ ಕಂಪನಿ ಸೂಕ್ತ ಸ್ಪಷ್ಟನೆ ನೀಡಿದೆ. App ಬಳಕೆದಾರರ ಯಾವುದೇ ಖಾಸಗಿ ಮಾಹಿತಿ ಪರರ ಪಾಲಾಗದ ಭದ್ರತಾ ವ್ಯವಸ್ಥೆಗಳು ಇದರಲ್ಲಿವೆ ಎಂದು ಕ<ೊನಿ ಭರವಸೆ ನೀಡಿದೆ.

 ವೈಶಿಷ್ಟ್ಯಗಳು
ಉತ್ತಮ ಫೋಟೋಗ್ರಾಫಿ ಅನುಭವ ನೀಡಲು ಬಳಕೆದಾರರಿಗೆ ಇದರಲ್ಲಿ ಏರ್ ಕನೆಕ್ಟರ್ ಸೇರಿದಂತೆ ಇನ್ ಬಿಲ್ಟ್ ಫಿಲ್ಟರ್ಸ್ ಗಳ ಸಪೋರ್ಟ್ ಸಿಗಲಿದೆ. ಇದಲ್ಲದೆ app ನಲ್ಲಿ ಬಳಕೆದಾರರ ಡೇಟಾ ಸುರಕ್ಷತೆಗಾಗಿ ಎಂಡ್ ಯೂಸರ್ ಎನ್ಕ್ರಿಪ್ಶನ್ ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ app ನ ವಿಶೇಷತೆ ಎಂದರೆ, ಬಳಕೆದಾರರ ಅನುಮತಿ ಇಲ್ಲದೆ ಬಳಕೆದಾರರ ಯಾವುದೇ ಮಾಹಿತಿಯನ್ನು ಥರ್ಡ್ ಪಾರ್ಟಿಗೆ ನೀಡಲಾಗುವುದಿಲ್ಲ. 

ಅಪ್ಪಟ ಭಾರತೀಯ app

ಭಾರತದಲ್ಲಿ ಇಂದು ಅತಿ ದೊಡ್ಡ ಸಂಖ್ಯೆಯಲ್ಲಿ ಜನರು ಸಾಮಾಜಿಕ ಮಾಧ್ಯಮ app ಗಳನ್ನು ಬಳಸುತ್ತಾರೆ. ಆದರೆ ಇನ್ನೊಂದೆಡೆ ಸಾಮಾಜಿಕ ಮಾಧ್ಯಮ app ಕ್ಷೇತ್ರದಲ್ಲಿ ಬಹುತೇಕ ಮುಂಚೂಣಿಯಲ್ಲಿರುವ ಕಂಪನಿಗಳು ವಿದೇಶಿ ಕಂಪನಿಗಳಾಗಿವೆ. ಈ ಹಿನ್ನೆಲೆಯಲ್ಲಿ ಜುಲೈ 5 ರಂದು ದೇಶದ ಮೊದಲ ‘ಸುಪರ್ ಸೋಶಿಯಲ್ ಮೀಡಿಯಾ ಆಪ್’ Elyments ಬಿಡುಗಡೆಗೊಳಿಸಲಾಗಿದೆ.

Previous articleಕೋವಿಕೋಟ್-‌ಇದು ಕೊರೊನಾ ವಿರುದ್ಧ ರಕ್ಷಾಕವಚ
Next articleಬೆಂಗಳೂರಿಗೆ ಕಂಟಕವಾಗಲಿದೆಯೇ ಜುಲೈ ತಿಂಗಳು?

LEAVE A REPLY

Please enter your comment!
Please enter your name here