ಕೊರೊನ ವೈರಸ್ ಎಚ್‌ಐವಿ ಮಾದರಿಯಲ್ಲೆ ನಮ್ಮ ರೋಗ ನಿರೋಧಕ ವ್ಯವಲ್ಥೆಯನ್ನು ಕೆಡಿಸುತ್ತದೆ ಎನ್ನುವುದನ್ನು ಹೊಸ ಸಂಶೋಧನೆಯೊಂದು ಸಾಬೀತುಪಡಿಸಿದೆ.
ಪೆನ್ನಿಸಿಲ್ವೇನಿಯ ವಿವಿಯ ಸಂಶೋಧಕ ಜಾನ್ ವೆರ್ರಿ ನಡೆಸಿದ ಸಂಶೋಧನೆ ಪ್ರಕಾರ ತೀವ್ರ ಅಸ್ವಸ್ಥ ರೋಗಿಗಳ ರೋಗ ನಿರೋಧಕ ವ್ಯವಸ್ಥೆಯ ಮೇಲೆ ತೀವ್ರವಾಗಿ ದಾಳಿ ಮಾಡುವ ಕೊರೊನ ವೈರಸ್ ಟಿ ಸೆಲ್ಸ್ ಅನ್ನು ನಾಶ ಮಾಡುತ್ತದೆ.ಹೀಗಾಗಿ ದೇಹ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.ಎಚೈವಿ ರೋಗಿಗಳಲ್ಲೂ ಟಿ ಸೆಲ್ ನಾಶವಾಗುವುದರಿಂದಲೇ ಆರೋಗ್ಯ ಬಿಗಡಾಯಿಸುತ್ತದೆ.