• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಿಧನ

ಹಿರಿಯ ಲೇಖಕ –ಉದ್ಯಮಿ ಎಸ್ಕೆ ಹಳೆಯಂಗಡಿ ನಿಧನ

ಮುಂಬಯಿ, ಸೆ. 1: ಹಿರಿಯ ಲೇಖಕ ಹಾಗೂ ಉದ್ಯಮಿ ಎಸ್ಕೆ ಹಳೆಯಂಗಡಿ (85) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಸೆ.1ರಂದು ಬರೋಡಾದ ಸ್ವಗೃಹದಲ್ಲಿ ನಿಧನರಾಗಿದ್ದಾರೆ . ಬಾಲ್ಯದಲ್ಲೇ ಮುಂಬಯಿಗೆ ಹೋಗಿ ರಾತ್ರಿ ಶಾಲೆಯಲ್ಲಿ ಕಲಿತು ಜೀವನದಲ್ಲಿ ನೆಲೆಯಾಗಿದ್ದ ಎಸ್ಕೆಯವರು ಅನಂತರ ಗುಜರಾತಿಗೆ ತೆರಳಿ ಅಲ್ಲಿನ ಬರೋಡಾದಲ್ಲಿ ಉದ್ಯಮಿಯಾಗಿ ಬೆಳೆದಿದ್ದರು. ಬರೋಡಾ ತುಳು ಸಂಘ ಸೇರಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೇ ಬರವಣಿಗೆಯ ಅಭಿರುಚಿ ಹೊಂದಿದ್ದ ಅವರು ಸಾವಿರಕ್ಕೂ  ಅಧಿಕ ಲೇಖನಗಳನ್ನು ಬರೆದಿದ್ದಾರೆ. ಸುಖದ ಗುಟ್ಟು

ಹಿರಿಯ ಲೇಖಕ –ಉದ್ಯಮಿ ಎಸ್ಕೆ ಹಳೆಯಂಗಡಿ ನಿಧನ Read More »

ಅಶೋಕ್‌ ಬಾಬು ಸುವರ್ಣ ನಿಧನ

ಮುಂಬಯಿ, ಆ. 31: ಮುಂಬಯಿಯ ವಿಲೇಪಾರ್ಲೆಯ ಇರ್ಲಾ ರೋಡ್ ನ ಜೋಶಿ ಸೊಸೈಟಿಯ ನಿವಾಸಿ ಅಶೋಕ್‌ ಬಾಬು ಸುವರ್ಣ ಅವರು (65) ಆ. 28 ರಂದು ನಿಧನರಾಗಿದ್ದಾರೆ. ಮೂಲತಃ ಕಾರ್ಕಳದ ಶಿರ್ತಾಡಿಯ ಅತ್ತಸ ಕಟ್ಟೆ, ‘ಜಿನ್ನಮ್ಮ ನಿವಾಸ’ದವರಾಗಿರುವಅವರು ಪತ್ನಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅಶೋಕ್‌ ಬಾಬು ಸುವರ್ಣ ನಿಧನ Read More »

ಹಿರಿಯ ಪತ್ರಕರ್ತ ಕೆಪಿಕೆ ಪೈ ನಿಧನ

ಕಾರ್ಕಳ, ಆ. 30: ಕಾರ್ಕಳದ ಹಿರಿಯ ಪತ್ರಕರ್ತ ಕೆ.ಪಾಂಡುರಂಗ ಪೈ (78) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.30ರಂದು ನಿಧನರಾಗಿದ್ದಾರೆ. ಪತ್ರಕರ್ತರಾಗಿ ಮೂರು ದಶಕಗಳಿಗೂ ಅಧಿಕ ಕಾಲ ದುಡಿದಿದ್ದ ಅವರು ಕಾರ್ಕಳದ ಎಸ್‌ವಿಟಿ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಕೇತರ ಸಿಬಂದಿಯಾಗಿ ಸೇವೆ ಸಲ್ಲಿಸಿದ್ದರು.  ಅವರು ಪತ್ನಿ, ಆರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ ಕೆಪಿಕೆ ಪೈ ನಿಧನ Read More »

ಬಿಲ್ಲವರ ಅಸೋಸಿಯೇಸನ್‌ ಮಾಜಿ ಕಾರ್ಯದರ್ಶಿ ಎಲ್.‌ ಡಿ. ಕೋಟ್ಯಾನ್‌ ನಿಧನ

ಮುಂಬಯಿ, ಆ. 29: ಮುಂಬಯಿ ಬಿಲ್ಲವರ ಅಸೋಸಿಯೇಶನ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಎಲ್.‌ ಡಿ. ಕೋಟ್ಯಾನ್‌ (80) ಅವರು ಆ.29ರಂದು ನಿಧನರಾಗಿದ್ದಾರೆ. ಬ್ಯಾಂಕ್‌ ಆಫ್‌ ಇಂಡಿಯಾದ ನಿವೃತ್ತ ಅಧಿಕಾರಿಯಾಗಿದ್ದ ಎಲ್‌ . ಡಿ. ಕೋಟ್ಯಾನ್‌ ಪತ್ನಿ , ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ  ನಿಧನಕ್ಕೆ ಭಾರತ್‌ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ನಿರ್ದೇಶಕ ವಿ.ಆರ್.‌ ಕೋಟ್ಯಾನ್‌ ಸಹಿತ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿಲ್ಲವರ ಅಸೋಸಿಯೇಸನ್‌ ಮಾಜಿ ಕಾರ್ಯದರ್ಶಿ ಎಲ್.‌ ಡಿ. ಕೋಟ್ಯಾನ್‌ ನಿಧನ Read More »

ಪಲಿಮಾರು ಲಿಲ್ಲಿ ರಾಮದಾಸ್ ಪ್ರಭು ನಿಧನ.

ಕಾರ್ಕಳ : ಪಲಿಮಾರು ರಾಮದಾಸ್ ಜಿ ಪ್ರಭು ಅವರ ಪತ್ನಿ ಲಿಲ್ಲಿ ರಾಮದಾಸ್ ಪ್ರಭು (91) ಆ. 29ರಂದು ವಯೋ ಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಪಲಿಮಾರು ಲಿಲ್ಲಿ ರಾಮದಾಸ್ ಪ್ರಭು ಶೈಕ್ಷಣಿಕ ಟ್ರಸ್ಟಿನ ಓರ್ವ ಟ್ರಸ್ಟಿಯಾಗಿದ್ದರು. ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಲಿಮಾರು ಲಿಲ್ಲಿ ರಾಮದಾಸ್ ಪ್ರಭು ನಿಧನ. Read More »

ಯಕ್ಷಗಾನ ವಿದ್ವಾಂಸ ಡಾ. ನಾರಾಯಣ ಶೆಟ್ಟಿ ನಿಧನ

ಮಂಗಳೂರು, ಆ. 26:ಯಕ್ಷಗಾನ ಛಂದೋಬ್ರಹ್ಮ ಎಂದೇ ಖ್ಯಾತರಾಗಿದ್ದ ಹಿರಿಯ ವಿದ್ವಾಂಸ ಡಾ.ಶಿಮಂತೂರು ಎನ್.ನಾರಾಯಣ ಶೆಟ್ಟಿಯವರು (87)  ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.26 ರಂದು ನಿಧನರಾದರು. ಯಕ್ಷಗಾನ ವಿದ್ವಾಂಸರಾಗಿದ್ದ ನಾರಾಯಣ ಶೆಟ್ಟಿಯವರು ಬರೆದ ಯಕ್ಷಗಾನ ಛಂದೋಂಬುಧಿ ಕೃತಿಗೆ ಹಂಪಿ ವಿವಿ ಡಾಕ್ಟರೇಟ್‌  ನೀಡಿತ್ತು. ಸೊರ್ಕುದ ಸಿರಿಗೆಂಡೆ ಸೇರಿ ಹಲವು ಯಶಸ್ವಿ ಯಕ್ಷಗಾನ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಕರಾವಳಿಯ ಆತಿ ಜನಪ್ರಿಯ ಪ್ರಸಂಗ ಶ್ರೀ ದೇವಿ ಮಹಾತ್ಮೆಯನ್ನು ಅವರು 14 ವರ್ಷ ಪ್ರಾಯದಲ್ಲೇ ರಚಿಸಿದ್ದರು. ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಪಡೆದ ಮೊದಲಿಗರು

ಯಕ್ಷಗಾನ ವಿದ್ವಾಂಸ ಡಾ. ನಾರಾಯಣ ಶೆಟ್ಟಿ ನಿಧನ Read More »

ಉದ್ಯಮಿ ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾವಿ ನಿಧನ

ಹೆಬ್ರಿ,ಆ. 24 : ಹೆಬ್ರಿ ಚಾರ ಕೂತಾಡಿ ಮನೆತನದ ಕೆ. ರತ್ನಾಕರ್ ಶೆಟ್ಟಿ ಬೆಳಗಾವಿ ಆ.25ರಂದು ನಿಧನರಾದರು. ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಮುಂದಾಳುವಾಗಿದ್ದ  ಸರಳ ಸಜ್ಜನಿಕೆಯ ಜನನಾಯಕ ಅವರು.     ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅವರು  ಬೆಳಗಾವಿಯಲ್ಲಿ ಉದ್ಯಮವನ್ನು ಸ್ಥಾಪಿಸಿ, ಹಲವರಿಗೆ ಉದ್ಯೋಗದಾತರಾಗಿ ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದರು. ಬೆಳಗಾವಿಯ ಜನ ನಾಯಕ ಸತೀಶ್ ಜಾರಕಿಹೋಳಿ ಅವರಿಗೆ ಆಪ್ತರಾಗಿದ್ದರು. ಬೆಳಗಾವಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ , ಬೆಳಗಾಂ ಮರ್ಚಂಟ್ಸ್ ಕೊ- ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಲಿ.ಬೆಳಗಾವಿ

ಉದ್ಯಮಿ ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾವಿ ನಿಧನ Read More »

ಕಲ್ಯಾ ಗರಡಿಯ ಆಡಳಿತ ಮೊಕ್ತೇಸರ ಬಾಲೇಶ್ ಅತಿಕಾರಿ ನಿಧನ

ಕಾರ್ಕಳ : ಕಲ್ಯಾ ಪರಾಡಿ ಜೈನ ಮನೆತನದ ಬಾಲೇಶ್ ಅತಿಕಾರಿ (66) ಆ. 21 ರಂದು  ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅಪಾರ ದೈವಭಕ್ತರಾಗಿದ್ದ ಬಾಲೇಶ್ ಅತಿಕಾರಿಯವರು ಕಲ್ಯಾ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾಗಿ ಮತ್ತು ಕಲ್ಯಾ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಿನಸಿ ಅಂಗಡಿ ಮಾಲಕರಾಗಿದ್ದ ಅವರು ಊರಿನ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಂತಾಪ ಬಾಲೇಶ್ ಅತಿಕಾರಿಯವರ ನಿಧನಕ್ಕೆ ಕಲ್ಯಾ

ಕಲ್ಯಾ ಗರಡಿಯ ಆಡಳಿತ ಮೊಕ್ತೇಸರ ಬಾಲೇಶ್ ಅತಿಕಾರಿ ನಿಧನ Read More »

ಜಯವಂತ ನಾಯಕ್‌ ಕಾರ್ಕಳ ನಿಧನ

ಕಾರ್ಕಳ, ಆ.17 : ಜಿಎಸ್ ಬಿ ಸಮುದಾಯದ ಹಿರಿಯ ಮುಂದಾಳು, ನಿವೃತ್ತ ಉಪನ್ಯಾಸಕ  ಜಯವಂತ ನಾಯಕ್‌  ಕಾರ್ಕಳ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.17ರಂದು ನಿಧನರಾಗಿದ್ದಾರೆ. ಜಿಎಸ್‌ ಬಿ ಸಮುದಾಯದ ಸಂಸ್ಕಾರ ಬೋಧ ಎಂಬ ಪತ್ರಿಕೆಯನ್ನು ಅವರು ಸಂಪಾದಕರಾಗಿ ಮುನ್ನಡೆಸುತ್ತಿದ್ದರು. ಭುವನೇಂದ್ರ  ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು ಉದ್ಯಮಿಯಾಗಿಯೂ ಯಶಸ್ವಿಯಾಗಿದ್ದರು.

ಜಯವಂತ ನಾಯಕ್‌ ಕಾರ್ಕಳ ನಿಧನ Read More »

ಶೈಕ್ಷಣಿಕ ಕ್ಷೇತ್ರದ ಸಾಧಕ, ಉದ್ಯಮಿ ತುಂಬೆ ಅಹಮದ್‌ ಹಾಜಿ ಮುಹಿಯುದ್ದೀನ್‌ ನಿಧನ

ಮಂಗಳೂರು, ಆ. 16: ಶೈಕ್ಷಣಿಕ ಕ್ಷೇತ್ರದ ಸಾಧಕ, ಉದ್ಯಮಿ ತುಂಬೆ ಅಹಮದ್‌ ಹಾಜಿ ಮುಹಿಯುದ್ದಿನ್ (89) ಭಾನುವಾರ ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಮರದ ಉದ್ಯಮವನ್ನು ಸ್ಥಾಪಿಸಿ ಹಂತಹಂತವಾಗಿ ಮೇಲೇರಿದ ಅವರು ಮುಹಿಯುದ್ದೀನ್‌ ಎಜುಕೇಶನಲ್‌ ಟ್ರಸ್ಟ್‌ ಸ್ಥಾಪಿಸಿ ಪ್ರೌಢ ಶಾಲೆ, ಪಿಯು ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆ, ಬಿಎ ಆಸ್ಪತ್ರೆ ತೆರೆದು ಮುನ್ನಡೆಸಿದರು.ಸಮುದಾಯದ ಹಿರಿಯ ವ್ಯಕ್ತಿಯಾಗಿ ನೂರಾರು ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಮಂಗಳೂರು ವಿವಿಯ ಸಿಂಡಿಕೇಟ್‌ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಸಾಧಕ, ಉದ್ಯಮಿ ತುಂಬೆ ಅಹಮದ್‌ ಹಾಜಿ ಮುಹಿಯುದ್ದೀನ್‌ ನಿಧನ Read More »

error: Content is protected !!
Scroll to Top