ಕಾರ್ಕಳ, ಆ. 30: ಕಾರ್ಕಳದ ಹಿರಿಯ ಪತ್ರಕರ್ತ ಕೆ.ಪಾಂಡುರಂಗ ಪೈ (78) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.30ರಂದು ನಿಧನರಾಗಿದ್ದಾರೆ.
ಪತ್ರಕರ್ತರಾಗಿ ಮೂರು ದಶಕಗಳಿಗೂ ಅಧಿಕ ಕಾಲ ದುಡಿದಿದ್ದ ಅವರು ಕಾರ್ಕಳದ ಎಸ್‌ವಿಟಿ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಕೇತರ ಸಿಬಂದಿಯಾಗಿ ಸೇವೆ ಸಲ್ಲಿಸಿದ್ದರು.
ಅವರು ಪತ್ನಿ, ಆರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.




































