ಕಾರ್ಕಳ : ರಸ್ತೆಯಲ್ಲಿ ವಾಹನದ ಆಯಿಲ್ ಲಿಕೇಜ್ ಆದ ಪರಿಣಾಮ ಸರಣಿ ಅಪಘಾತ ನಡೆದ ಘಟನೆ ಜು. 20ರಂದು ಬೆಳಗ್ಗೆ ಮಾಳ ಚೆಕ್ ಪೋಸ್ಟ್ ಬಳಿ ನಡೆದಿದೆ.
ಕಾರ್ಕಳದಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 169 (NH 169) ಇದಾಗಿದ್ದು, ಮಂಗಳೂರಿನಿಂದ ಕಾರ್ಕಳ, ಬಜಗೋಳಿ, ಮಾಳ ಘಾಟ್, ಎಸ್.ಕೆ. ಬಾರ್ಡರ್ ಹಾಗೂ ಕೆರೆಕಟ್ಟೆ ಮಾರ್ಗವಾಗಿ ಶೃಂಗೇರಿ ಮತ್ತು ಶಿವಮೊಗ್ಗವನ್ನು ಸಂಪರ್ಕಿಸುತ್ತದೆ. ಅಲ್ಲದೇ ಕುದುರೆಮುಖ, ಕಳಸ, ಹೊರನಾಡಿಗೂ ಸಂಪರ್ಕ ಕೊಂಡಿಯಾಗಿದೆ.
ಟಿಪ್ಪರ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಆಯಿಲ್ ಲೀಕೇಜ್ ಆಗಿದ್ದು, ನಂತರ ಎರಡು ಕಾರುಗಳು ಸರಣಿ ಅಪಘಾತಕ್ಕೀಡಾಗಿದೆ. ಅಪಕ್ಕಾತಕ್ಕೀಡಾದ ಕಾರುಗಳಲ್ಲಿ ಪಲ್ಟಿಯಾಗಿದ್ದು, ಇನ್ನೊಂದು ಕಾರು ಗೋಡೆಗೆ ಬಡಿದಿದೆ, ಮತ್ತೊಂದು ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.










































