ಬೇಸಿಗೆಯಲ್ಲಿ ದೇಹದ ಆರೈಕೆ

ಬಿಸಿಲಿನ ತಾಪ ಏರಿದಂತೆ ನಮ್ಮ ದೇಹವು ಅದನ್ನು ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ. ಸೆಖೆಗೆ ವಾತ ದೋಷವು ಉಲ್ಬಣಗೊಳ್ಳುತ್ತದೆ. ಅಲ್ಪ ಶರೀರ ಬಲ ಹಾಗೂ ದುರ್ಬಲ ಜೀರ್ಣ ಶಕ್ತಿಯಿಂದ ದೇಹವು ಜರ್ಜರಿತವಾಗುತ್ತದೆ. ಇದನ್ನೆಲ್ಲಾ ತಡೆಯಲು ಇಲ್ಲಿದೆ ಕೆಲವು ಟಿಪ್ಸ್.
ಬೆಳಿಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ಪ್ರಖರ ಸೂರ್ಯನ ಕಿರಣವಿರುವುದರಿಂದ ಆದಷ್ಟು ಬಿಸಿಲಿನಲ್ಲಿ ಸಮಯ ಕಳೆಯಬಾರದು. ಅನಿವಾರ್ಯವಿದ್ದರೆ ತಲೆಗೆ ಕ್ಯಾಪ್ ಅಥವಾ ಛತ್ರಿಯನ್ನು ಉಪಯೋಗಿಸಬೇಕು. ಕಣ್ಣಿನ ರಕ್ಷಣೆ ಬಹಳ ಮುಖ್ಯ. ಹೊರಗಿನಿಂದ ಬಂದ ತಕ್ಷಣ ಕಣ್ಣನ್ನು ನೀರಿನಿಂದ ತೊಳೆಯಬಾರದು. ಅದು ಕಣ್ಣಿಗೆ ಹಾನಿ ಉಂಟು ಮಾಡುವುದರಿಂದ ಹೊರಗಿನಿಂದ ಬಂದ 20 ನಿಮಿಷಗಳ ಬಳಿಕ ಕಣ್ಣನ್ನು ತಣ್ಣೀರಿನಿಂದ ತೊಳೆಯುವುದು ಸೂಕ್ತ.

ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಅಂಶ ಕಡಿಮೆಯಾಗುತ್ತದೆ. ಐಸ್ ಕ್ರೀಂ, ಕೋಲ್ಡ್ ರಿಂಗ್ಸ್, ಕಾರ್ಬೊನೇಟೆಡ್ ಪಾನೀಯಗಳು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಇದರ ಬದಲು ನೈಸರ್ಗಿಕವಾಗಿ ದೊರೆಯುವಂತಹ ಪಾನೀಯ ಸೇವಿಸುವುದು ಉತ್ತಮ. ಎಳನೀರು, ಬಾರ್ಲಿ ನೀರು ಆರೋಗ್ಯಕ್ಕೆ ಒಳ್ಳೆಯದು. ಕುಡಿಯುವ ನೀರಿನಲ್ಲಿ ಲಾವಂಚದ ಬೇರು ಅಥವಾ ಚೂರ್ಣವನ್ನು ಹಾಕಿ ರಾತ್ರಿಯಿಡೀ ಇಟ್ಟು ಮರುದಿನ ಕುಡಿಯುವುದು ಉತ್ತಮ. ಕೊತ್ತಂಬರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುವುದು.
ಆಹಾರದಲ್ಲಿ ದ್ರವ ಆಹಾರ ಅಧಿಕ ಸೇವಿಸಿದರೆ ದೇಹಕ್ಕೆ ಹಿತಕರ. ತುಪ್ಪ ಒಳ್ಳೆಯದು. ದಿನಕ್ಕೆ ಒಂದು ಚಮಚ ತುಪ್ಪ ಆಹಾರದಲ್ಲಿ ಬಳಸಿ. ಜಾಸ್ತಿ ಸೇವಿಸುವುದು ಬೇಡ. ಗೋಧಿ, ಅಕ್ಕಿ, ಬಾರ್ಲಿ, ಹೆಸರುಬೇಳೆ, ಹಾಲು, ಹಣ್ಣುಗಳು ಒಳ್ಳೆಯದು. ಬೆಲ್ಲದ ಪಾನಕ, ಲಿಂಬೆ ಹಣ್ಣಿನ ಶರಬತ್, ಕುಕಂ ಶರಬತ್, ಕಬ್ಬಿನ ಹಾಲು, ಹೆಸರುಕಾಳಿನ ಜ್ಯೂಸ್ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮಡಿಕೆಯಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಒಳ್ಳೆಯದು.

ಮಧ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಉಪ್ಪು, ಖಾರ, ಹುಳಿ ಪದಾರ್ಥ ಸೇವಿಸುವುದು ಕಡಿಮೆ ಮಾಡಿಬೇಕು. ತರಕಾರಿ ಸೂಪ್ ಅಥವಾ ಜ್ಯೂಸ್, ಸುಪಾಚ್ಯ ಹಾಗೂ ಬಿಸಿಯಾದ ಆಹಾರ ಸೇವಿಸಬೇಕು. ಆಹಾರದ ಪ್ರಮಾಣ ಮಾತ್ರ ಕಡಿಮೆ ಇರಲಿ. ಮಧ್ಯಾಹ್ನದ ಹೊತ್ತು ಸ್ವಲ್ಪ ನಿದ್ದೆ ಮಾಡಬಹುದು. ಬೇಸಿಗೆಯಲ್ಲಿ ಅದು ಅಗತ್ಯ. ಬೇರೆ ಋತುವಿನಲ್ಲಿ ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವುದು ಆಯುರ್ವೇದದಲ್ಲಿ ನಿಷೇಧೆ. ದೇಹಕ್ಕೆ ಚಂದನದ ಲೇಪ ಹಚ್ಚುವುದು, ಸುಗಂಧ ಯುಕ್ತ ಹೂವಿನ ಮಾಲೆ ಧರಿಸುವುದು ಆಯುರ್ವೇದದಲ್ಲಿ ಹೇಳಿದೆ. ಗಿಡಗಳ ಮಧ್ಯೆ ಸಮಯವನ್ನು ಕಳೆಯುವುದು ಒಳ್ಳೆಯದು. ಮನೆಯ ಸುತ್ತ ಗಿಡಗಳನ್ನು ಬೆಳೆಸಿ ಇದು ಮನೆಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ ಆರೋಗ್ಯಕರ ಕೂಡ.

ಅಧಿಕ ವ್ಯಾಯಾಮ, ಅಧಿಕ ಶಾರೀರಿಕ ಶ್ರಮ ದೇಹವನ್ನು ದಣಿವು ಮಾಡುವ ಯಾವುದೇ ಕಾರ್ಯವನ್ನು ಬೇಸಿಗೆಯಲ್ಲಿ ಮಾಡುವುದು ಬೇಡ. ಬೇಸಿಗೆಯಲ್ಲಿ ತ್ವಚೆ ಆರೈಕೆ ಬಹಳ ಮುಖ್ಯ. ಸೆಕೆಗೆ ತ್ವಚೆಯ ಶುಷ್ಕಗೊಳ್ಳುತ್ತದೆ. ತೆಂಗಿನ ಎಣ್ಣೆ, ಲೋಳೆ ರಸ ಹಚ್ಚುವುದು ಒಳ್ಳೆಯದು. ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಭೇಟಿಯಾಗಿ. ಇದನ್ನೆಲ್ಲ ಪಾಲಿಸಿ ಆರೋಗ್ಯದಿಂದಿರಿ.

ಬೇಸಿಗೆಯಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆ ಮತ್ತು ಪರಿಹಾರ

  1. ಡಿಹೈಡ್ರೇಶನ್ (ನೀರಿನ ಕೊರತೆ)
    ಅತಿಯಾದ ಬಿಸಿಲು ಹಾಗೂ ಬೆವರಿನಿಂದ ನಿರ್ಜಲೀಕರಣವಾಗುತ್ತದೆ. ಹೆಚ್ಚು ನೀರು ಕುಡಿಯಿರಿ, ಮಜ್ಜಿಗೆ, ಎಲೆಯ ರಸ, ತೆಂಗಿನ ನೀರು, ಕಲ್ಲಂಗಡಿ, ಸೌತೆಕಾಯಿ, ಪೇರಳೆ ಸೇವಿಸಬೇಕು.
  2. ಚರ್ಮದ ಸಮಸ್ಯೆಗಳು (ರಾಶ್, ಬಿಸಿಲು ಕಲೆಗಳು)
    ಅಲೋವೆರಾ ಜೆಲ್ ಬಳಕೆ ಮಾಡುವುದು, ತಣ್ಣೀರಿನ ಸ್ನಾನ, ಚಂದನದ ಪೇಸ್ಟ್ ತ್ವಚೆಗೆ ಹಚ್ಚಿವುದು, ಸನ್‌ಸ್ಕ್ರೀನ್ ಬಳಕೆ ಮಾಡುವುದು ಉತ್ತಮ.
    3.ಹೀಟ್ ಸ್ಟ್ರೋಕ್
    ಹೀಟ್ ಸ್ಟ್ರೋಕ್ ಒಂದು ಗಂಭೀರ ಸ್ಥಿತಿಯಾಗಿದ್ದು, ದೇಹದ ಉಷ್ಣತೆಯು ತುಂಬಾ ಹೆಚ್ಚಾದಾಗ ಸಂಭವಿಸುತ್ತದೆ, ಸಾಮಾನ್ಯವಾಗಿ ದೀರ್ಘಕಾಲದವರೆಗೆ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಅಥವಾ ಕಠಿಣ ಚಟುವಟಿಕೆಯಿಂದಾಗಿ. ಇದು ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಜೀವಕ್ಕೆ ಅಪಾಯಕಾರಿ ಸ್ಥಿತಿಯಾಗಿದೆ.
    ಹೀಟ್ ಸ್ಟ್ರೋಕ್‌ನ ಸಾಮಾನ್ಯ ಲಕ್ಷಣಗಳು
    ಹೆಚ್ಚಿನ ದೇಹದ ಉಷ್ಣತೆ (104°F ಅಥವಾ 40°C ಮೇಲೆ), ಗೊಂದಲ, ಆತಂಕ, ಬೆವರು ಇಲ್ಲದೆಯೇ ಬಿಸಿಯಾಗಿರುವ ಮತ್ತು ಒಣಗಿದ ಚರ್ಮ, ವೇಗದ ನಾಡಿಮಿಡಿತ, ತಲೆ ತಿರುಗುವುದು, ತೀವ್ರ ತಲೆಬೇನೆ.
    ಹೀಟ್ ಸ್ಟ್ರೋಕ್ ನಿಂದ ತಡೆಗಟ್ಟುವುದು ಹೇಗೆ?
  • ಹಗಲಿನಲ್ಲಿ ಹೆಚ್ಚು ನೀರು ಕುಡಿಯುವುದು
  • ಬಿಗಿಯಾದ, ಗಾಢ ಬಣ್ಣದ ಬಟ್ಟೆಗಳನ್ನು ತಪ್ಪಿಸುವುದು
  • ವಾತಾನುಕೂಲಿತ ಅಥವಾ ನೆರಳಿನ ಪ್ರದೇಶಗಳಲ್ಲಿ ಉಳಿಯುವುದು
  • ಅಧಿಕ ಶ್ರಮದ ಚಟುವಟಿಕೆಯನ್ನು ತಪ್ಪಿಸುವುದು
  • ತಂಪಾದ ಸ್ನಾನ ಅಥವಾ ಶವರ್ ತೆಗೆದುಕೊಳ್ಳುವುದು
































































































error: Content is protected !!
Scroll to Top